ಮುಲ್ಕಿ: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳಚಿಕಂಬಳದ ಶ್ರೀ ಜಾರಂದಾಯ ದೈವಸ್ತಾನದ ವಠಾರದಲ್ಲಿ ಪೊಲೀಸ್ ಬೀಟ್ ಸಭೆ ನಡೆಯಿತು.
ಈ ವೇಳೆ ಮುಲ್ಕಿ ಪೊಲೀಸ್ ಠಾಣೆಯ ಎಎಸ್‌ಐ ಉಮೇಶ್ ಮಾಹಿತಿ ನೀಡಿ ಗ್ರಾಮದ ಪರಿಸರದಲ್ಲಿ ಅಪರಿಚಿತ ವ್ಯಕ್ತಿಗಳು ಕಂಡು ಬಂದಲ್ಲಿ ಅಮಲು ಪದಾರ್ಥ ಸೇವನೆ ಬಗ್ಗೆ ಮಾಹಿತಿ ಸಿಕ್ಕಿದಲ್ಲಿ 112 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದರು.
ಸಭೆಯಲ್ಲಿ ಗ್ರಾಮಸ್ತರು ಕೊಳಚಿಕಂಬಳದ ಅಳಿವೆ ಬಾಗಿಲು ಹಾಗೂ ಕಟ್ಟದಂಗಡಿಯ ಬಳಿಯ ಪಾರ್ಕ್ ಬಳಿ ರಾತ್ರಿ ಅವಧಿಯಲ್ಲಿ ಕೆಲವರು ವಾಹನದಲ್ಲಿ ಬಂದು ಮದ್ಯ ಸೇವನೆ ಮತ್ತಿತರ ಅನೈತಿಕ ಚಟುವಟಿಕೆಗಳನ್ನು ಮಾಡುತ್ತಿದ್ದು ರಾತ್ರಿಯ ಅವಧಿಯಲ್ಲಿ ಕೊಳಚಿಕಂಬಳ ಪಡುಬೈಲು ರಸ್ತೆಯಲ್ಲಿ ಪೊಲೀಸ್ ವಾಹನ ಗಸ್ತು ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಕೊಳಚಿಕಂಬಳ ವ್ಯಾಪ್ತಿಯ ಪೊಲೀಸ್ ಬೀಟ್ ನೊಡಿಕೊಳ್ಳುತ್ತಿರುವ ಸ್ವಾತಿಯವರು ಮಹಿಳೆಯರಿಗೆ ಮಾಹಿತಿ ನೀಡಿದರು.
ಕೊಳಚಿಕಂಬಳ ಶ್ರೀ ಜಾರಂದಾಯ ದೈವಸ್ತಾನದ ಸೇವಾ ಸಮಿತಿಯ ಅಧ್ಯಕ್ಷ ಪ್ರಕಾಶ್ ಸುವರ್ಣ,ಸಾನದ ಮನೆ ಕೃಷ್ಣ ಆರ್ ಕೋಟ್ಯಾನ್,ರಾಘು ಸುವರ್ಣ,ಶ್ರೀ ಜಾರಂದಾಯ ಧೂಮಾವತಿ ಯೂತ್ ಕ್ಲಬ್ ನ ಅಧ್ಯಕ್ಷ ಜೀವನ್ ಕೋಟ್ಯಾನ್,ಮಹಿಳಾ ಮಂಡಳಿಯ ಅಧ್ಯಕ್ಷೆ ಲತಾ ಶೇಖರ್, ಶೇಖರ್ ಪೂಜಾರಿ ಮತ್ತು ಗ್ರಾಮಸ್ತರು ಉಪಸ್ಥಿತರಿದ್ದರು.
Kshetra Samachara
01/10/2022 11:40 pm