ಬಂಟ್ವಾಳ: ಮಂಗಳವಾರ ನಸುಕಿನ ವೇಳೆ ಪಿಎಫ್ಐ ಜಿಲ್ಲಾಧ್ಯಕ್ಷ ಇಜಾಜ್ ಅಹಮದ್ ಸೇರಿದಂತೆ ಮೂವರನ್ನು ಬಂಟ್ವಾಳ ಪೊಲೀಸರು ವಶಕ್ಕೆ ಪಡೆದು (Preventive arrest) ತಹಶೀಲ್ದಾರ್ ಮುಂದೆ ಹಾಜರುಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ಬಿ.ಸಿ.ರೋಡ್ ಸುತ್ತಮುತ್ತ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಗೂಡಿನ ಬಳಿಯ ಫಿರೋಜ್ ಮತ್ತು ರಾಝಿಕ್ ಇತರ ಇಬ್ಬರು. ಈಗಾಗಲೇ ಕೆಲ ದಿನಗಳಿಂದ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪಿಎಫ್ಐ ಕಾರ್ಯಕರ್ತರ ಬಂಧನ ಹಾಗೂ ವಿಚಾರಣೆ ನಡೆಯುತ್ತಿದ್ದು, ಇದರ ಒಂದು ಭಾಗವಾಗಿ ಈ ಕಾರ್ಯಾಚರಣೆ ವರಿಷ್ಠ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸರು ಕೈಗೊಂಡಿದ್ದಾರೆ.
ಬಂಟ್ವಾಳ ಸುತ್ತಮುತ್ತಲಿರುವ ಪಿಎಫ್ಐ ಕಾರ್ಯಕರ್ತರ ಮನೆಗಳಿಗೆ ತೆರಳಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಅವರನ್ನು ಪ್ರತಿಬಂಧಕ ಕಾಯ್ದೆಯಡಿ ಗರಿಷ್ಠ ಅವಧಿಯ ಮುಚ್ಚಳಿಕೆಗಾಗಿ ಕಾರ್ಯನಿರ್ವಾಹಕ ನ್ಯಾಯಾಧೀಶರೂ ಆಗಿರುವ ಬಂಟ್ವಾಳ ತಹಶೀಲ್ದಾರ್ ಡಾ. ಸ್ಮಿತಾ ರಾಮು ಅವರ ಮುಂದೆ ಹಾಜರುಪಡಿಸಿದ್ದಾರೆ.
Kshetra Samachara
27/09/2022 09:11 am