ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಪೊಲೀಸ್ ಕಾರ್ಯಕ್ಕೆ ಅಡ್ಡಿಪಡಿಸಿದ 50-60 ಮಂದಿ ಪಿಎಫ್ಐ ಕಾರ್ಯಕರ್ತರು ವಶಕ್ಕೆ

ಮಂಗಳೂರು: ಎನ್ಐಎ ದಾಳಿಯ ವೇಳೆ ಅಲ್ಲಲ್ಲಿ ಸಾಕಷ್ಟು ಎಸ್‌ಡಿಪಿಐ, ಪಿಎಫ್ಐ ಕಾರ್ಯಕರ್ತರು ಜಮಾವಣೆ ಆಗಿದ್ದಾರೆಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ ಆ ರೀತಿಯ ಯಾವುದೇ ಕಾರ್ಯ ಆಗಿಲ್ಲ. ಜೋಕಟ್ಟೆ, ಕಾವೂರಿನಲ್ಲಿ ಜನ ಜಮಾವಣೆ ಆಗಿದ್ದು ಅವರನ್ನು ಹಿಂದೆ ಕಳುಹಿಸಲಾಗಿದೆ.

ಎನ್ಐಎ ದಾಳಿ ಆಗಿರುವ ಮಂಗಳೂರು ನಗರದ ನೆಲ್ಲಿಕಾಯಿ ರಸ್ತೆಯ ಎಸ್‌ಡಿಪಿಐ, ಪಿಎಫ್ಐ ಕಚೇರಿಯ ಬಳಿ 50-60 ಮಂದಿ ಸೇರಿದ್ದು, ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಯಾರೂ ಯಾವುದೇ ವದಂತಿಗಳಿಗೆ ಕಿವಿಗೊಡುವುದು ಬೇಡ. ಬಂದರು ಪ್ರದೇಶ ಆರ್ಥಿಕ ಚಟುವಟಿಕೆಗಳುಳ್ಳ ಪ್ರದೇಶ. ಆದ್ದರಿಂದ ಯಾವುದೇ ತೊಂದರೆಗಳಾಗದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಕೆಲವೊಂದು ಪ್ರಕರಣಗಳ ವಿಚಾರವಾಗಿ ಪರಿಶೀಲನೆ ಸಂಬಂಧ ಎನ್ಐಎ ಈ ದಾಳಿ ನಡೆಸಿದೆ. ಪೊಲೀಸರ ಕಾರ್ಯಕ್ಕೆ ಅಡ್ಡಿ ಪಡಿಸಲಾಗುತ್ತಿದೆ ಎಂಬ ಕಾರಣಕ್ಕೆ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

Edited By : Shivu K
PublicNext

PublicNext

22/09/2022 11:30 am

Cinque Terre

25.64 K

Cinque Terre

5