ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಖಾಸಗಿ ಬಸ್ ಗಳು ಅಧಿಕ ಪ್ರಯಾಣ ದರ ಪಡೆಯುವಂತಿಲ್ಲ; ಪ್ರಾದೇಶಿಕ ಸಾರಿಗೆ ಅಧಿಕಾರಿ

ಉಡುಪಿ: ಜಿಲ್ಲೆಯಲ್ಲಿ ಪ್ರಸ್ತುತ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ 2020ರ ಅ.13 ಹಾಗೂ 2021ರ ನ.10ರಂದು ವಾಹನ ಪ್ರಯಾಣ ದರ ಪರಿಷ್ಕರಿಸಿ ನಿಗದಿಪಡಿಸಿದ ದರವು ಜಾರಿಯಲ್ಲಿದ್ದರೂ, ಕೆಲವು ಬಸ್ಸುಗಳಲ್ಲಿ ಪ್ರಯಾಣಿಕರಿಂದ ಅಧಿಕ ಪ್ರಯಾಣ ದರವನ್ನು ಪಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬರುತ್ತಿವೆ ಎಂದು ಜಿಲ್ಲೆಯ ಪ್ರಭಾರ ಪ್ರಾದೇಶಿಕ ಸಾರಿಗೆ

ಅಧಿಕಾರಿ ರವಿಶಂಕರ ಪಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದ್ದರಿಂದ ಪ್ರಾಧಿಕಾರವು 2020ರ ಅ.13 ಹಾಗೂ 2021ರ ನ.10ರಂದು ನಿಗದಿ ಪಡಿಸಿದ ಪ್ರಯಾಣದರವನ್ನೇ ಜಿಲ್ಲೆಯ ಎಲ್ಲಾ ಎಕ್ಸ್‌ಪ್ರೆಸ್, ಸರ್ವಿಸ್ ಹಾಗೂ ಸಿಟಿಬಸ್‌ಗಳು ಪಡೆಯುವಂತೆ ಅವರು ಎಲ್ಲಾ ಬಸ್‌ಗಳ ಮಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಇದಕ್ಕೆ ತಪ್ಪಿದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

21/09/2022 09:13 pm

Cinque Terre

4.87 K

Cinque Terre

4