ಸುಳ್ಯ: ಪ್ರತಿ ದಿನ ಕಾನೂನುಗಳ ಮಜಲುಗಳು ಬದಲಾವಣೆಯಾಗುತ್ತಿರುತ್ತದೆ. ಪೊಲೀಸರು ಮಾಡುವ ಕೆಲಸಕ್ಕೆ ಸರಿಯಾದ ಪ್ರಮಾಣದಲ್ಲಿ ನ್ಯಾಯ ಸಿಗಬೇಕಾದರೆ ಪೊಲೀಸರ ಜ್ಞಾನ ವಿಸ್ತಾರವಾಗಬೇಕು. ಆ ಮೂಲಕ ನಿಖರವಾದ ಸಾಕ್ಷ್ಯಗಳ ಮೂಲಕ ನ್ಯಾಯಯುತವಾದ ತೀರ್ಪು ನೀಡಲು ಸಾದ್ಯವಾಗುತ್ತದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ರವೀಂದ್ರ ಎಂ. ಜೋಶಿ ಹೇಳಿದರು.
ಅವರು ಜಿಲ್ಲಾ ಪೊಲೀಸ್ ಇಲಾಖೆ, ಅಭಿಯೋಜನಾ ಇಲಾಖೆ ಮಂಗಳೂರು ವಲಯ, ಪೊಲೀಸ್ ಉಪಾಧೀಕ್ಷರ ಕಚೇರಿ ಪುತ್ತೂರು, ಸಹಾಯಕ ಸರ್ಕಾರಿ ಅಭಿಯೋಜಕರ ಕಚೇರಿ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ತನಿಖೆ ಮತ್ತು ಅಧಿಕಾರಿ ಸಾಕ್ಷ್ಯಗಳ ಮಹತ್ವ ಎಂಬ ವಿಷಯದ ಬಗ್ಗೆ ಜಿಲ್ಲಾ ಮಟ್ಟದ ತನಿಖಾಧಿಕಾರಿಗಳಿಗೆ ತನಿಖೆಯ ವಿವಿಧ ಹಂತಗಳ ಕುರಿತು ಕೆವಿಜಿ ಆಯುರ್ವೇದ ಫಾರ್ಮಾ ಮತ್ತು ರಿಸರ್ಚ್ ಸೆಂಟರ್‌ನ ಸಭಾಂಗಣದಲ್ಲಿ ಶನಿವಾರ ನಡೆದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಅದ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಣೆ ಮಾತನಾಡಿ ಅಪರಾಧ ಪ್ರಕರಣಗಳಲ್ಲಿ ವಿಳಂಬ ಮಾಡದೇ ಎಫ್‌ಐಆರ್ ದಾಖಲಿಸಿಬೇಕು. ಅಪರಾದ ಪ್ರಕರಣಗಳ ಕೇಸುಗಳಿಗೆ ಸಾಕ್ಷ್ಯಗಳನ್ನು ಸಂಗ್ರಹ ಮಾಡಲು ಅನುಕೂಲವಾಗುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮಾರಗಳನ್ನು ಹೆಚ್ಚೆಚ್ಚು ಬಳಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಲಘು ವ್ಯವಹಾರಗಳ ನ್ಯಾಯಲಯ ಮತ್ತು ಎ.ಪಿ.ಎಂ.ಸಿ ನ್ಯಾಯಲಯದ ನ್ಯಾಯಾಧೀಶರಾದ ಸೋಮಶೇಖರ್. ಎ, ಸುಳ್ಯ ನ್ಯಾಯಾಲಯದ ಸಿವಿಲ್ ನ್ಯಾಯಧೀಶರಾದ ಅರ್ಪಿತಾ, ಸುಳ್ಯ ತಹಸೀಲ್ದಾರ್ ಅನಿತಾಲಕ್ಷ್ಮಿ, ಪುತ್ತೂರು ಪೋಕ್ಸೋ ನ್ಯಾಯಲಯದ ವಿಶೇಷ ಸರ್ಕಾರಿ ಅಭಿಯೋಜನಕ ಪುಷ್ಪರಾಜ್ ಅಡ್ಯಂತಾಯ,ಪುತ್ತೂರು ಡಿವೈಎಸ್‌ಪಿ ಡಾ. ವೀರಯ್ಯ ಹಿರೇಮಠ್, ಮಂಗಳೂರು ಡಿ.ಸಿ.ಆರ್.ಬಿ ವಿಭಾಗದ ಡಿವೈಎಸ್‌ಪಿ ಡಾ. ಗಾನ. ಪಿ. ಕುಮಾರ್ ಉಪಸ್ಥಿತರಿದ್ದರು. ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ ಸ್ವಾಗತಿಸಿದರು. ಕಾನ್‌ಸ್ಟೇಬಲ್ ದೇವರಾಜ್ ವಂದಿಸಿದರು. ಸುಳ್ಯ ನ್ಯಾಯಾಲಯದ ಸರಕಾರಿ ಅಭಿಯೋಜಕ ಜನಾರ್ದನ. ಬಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
11/09/2022 10:42 am