ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಣೇಶ ಹಬ್ಬ : ಇಂದು ಮದ್ಯದಂಗಡಿ ಬಂದ್ ಡಿಸಿ. ಕೂರ್ಮಾರಾವ್

ಉಡುಪಿ: ಗಣೇಶ ಹಬ್ಬದ ಆಚರಣೆಯ ಪ್ರಯುಕ್ತ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಜೋಡುರಸ್ತೆ, ಬೈಲೂರು, ಕೌಡೂರು ಹಾಗೂ ನೀರೆ ಗ್ರಾಮ, ಕಾಪು ತಾಲೂಕಿನ ಪುರಸಭಾ ವ್ಯಾಪ್ತಿ, ಕಾಪು ಪಡು, ಮಲ್ಲಾರು, ಮೂಳೂರು, ಉಳಿಯಾರಗೋಳಿ ಹಾಗೂ ಮಜೂರು ಗ್ರಾಮ, ಕುಂದಾಪುರ ತಾಲೂಕು ನಗರ ಠಾಣಾ ವ್ಯಾಪ್ತಿಯ ಕಸಬಾ, ವಡೇರಹೋಬಳಿ ಹಾಗೂ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿ, ಗುಜ್ಜಾಡಿ ಮತ್ತು ತ್ರಾಸಿ ಗ್ರಾಮಗಳ ವ್ಯಾಪ್ತಿಯಲ್ಲಿ ಬಾರ್ ಮತ್ತು ವೈನ್ ಶಾಪ್ ಗಳು ತೆರೆದಿದ್ದಲ್ಲಿ ಮದ್ಯಪಾನಾಸಕ್ತರು ಮದ್ಯಪಾನ ಮಾಡಿ ಗಲಭೆ ಸೃಷ್ಠಿಸುವ ಸಾಧ್ಯತೆ ಇರುವ ಹಿನ್ನೆಲೆ, ಅಬಕಾರಿ ಕಾಯ್ದೆಯನ್ವಯ ಈ ಮೇಲ್ಕಂಡ ಗ್ರಾಮಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ ಅಂಡ್ ರೆಸ್ಟೋರೆಂಟ್ ಮತ್ತು ವೈನ್ ಶಾಪ್ ಗಳಲ್ಲಿ ಸೆಪ್ಟೆಂಬರ್ 4 ರ ಬೆಳಗ್ಗೆ 6 ರಿಂದ ರಾತ್ರಿ 12 ರ ವರೆಗೆ ಅಬಕಾರಿ ಸನ್ನದುಗಳನ್ನು ಮುಚ್ಚಲು ಆದೇಶಿಸಿ, ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

04/09/2022 08:18 am

Cinque Terre

28.18 K

Cinque Terre

1

ಸಂಬಂಧಿತ ಸುದ್ದಿ