ಉಡುಪಿ: ಪಶ್ಚಿಮ ವಲಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಜಿಲ್ಲೆ ಹಾಗೂ ಮಂಗಳೂರು ಪೊಲೀಸ್ ಕಮಿಷನರೇಟ್ ಘಟಕದ ಒಟ್ಟು 27 ಅಧಿಕಾರಿ, ಸಿಬಂದಿಗೆ ಪಶ್ಚಿಮ ವಲಯ ಮಂಗಳೂರು ಮತ್ತು ಬೆಂಗಳೂರಿನ ಆಂತರಿಕ ಭದ್ರತಾ ವಿಭಾಗದ ಸಹಯೋಗದೊಂದಿಗೆ ಎರಡು ವಾರಗಳ ಡ್ರೋನ್ ತರಬೇತಿಯನ್ನು ಆಯೋಜಿಸಲಾಗಿದೆ. ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರು ತರಬೇತಿ ಶಿಬಿರ ಉದ್ಘಾಟಿಸಿದರು. ಮೊದಲ ತರಬೇತಿಯನ್ನು ಪೊಲೀಸರಿಗೆ ದೇಶದಲ್ಲೇ ಮೊದಲಾಗಿ ಕರ್ನಾಟಕ ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಆಂತರಿಕ ಭದ್ರತಾ ವಿಭಾಗದ ತಜ್ಞರ ತಂಡವು ತರಬೇತಿ ನೀಡಲಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಡ್ರೋನ್ ಬಳಕೆ, ರಾತ್ರಿ ವೇಳೆ ಸೂಕ್ಷ್ಮ ಪ್ರದೇಶ, ಕಾಡು ಗುಡ್ಡ ಪ್ರದೇಶಗಳಲ್ಲಿ ಡ್ರೋನ್ ಮೂಲಕ ಮಾಹಿತಿ ಸಂಗ್ರಹ ಮೊದಲಾದ ವಿಷಯಗಳ ಕುರಿತು ತರಬೇತಿ ನೀಡಲಾಗುತ್ತದೆ ಎಂದು ಪೊಲೀಸ್ ಅಧಿಕಾರಿ ಗಳು ತಿಳಿಸಿದ್ದಾರೆ.ಡ್ರೋನ್ ಮತ್ತು ಅದರ ಪರಿಕರ ಗಳನ್ನು ಬಳಸುವ ಬಗ್ಗೆ ಅಧಿಕಾರಿ, ಸಿಬಂದಿಗೆ ತರಬೇತಿ ನೀಡಲಾಗುತ್ತಿದೆ.
Kshetra Samachara
30/08/2022 10:59 am