ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ದ.ಕ.ಜಿಲ್ಲೆಯ ಸರಣಿ ಹತ್ಯೆಗೆ ಬಿಜೆಪಿ ಸರಕಾರದ ಕೋಮು ನೀತಿಗಳೇ ಕಾರಣ

ಮಂಗಳೂರು: ದ.ಕ‌.ಜಿಲ್ಲೆಯಲ್ಲಿ ನಡೆದಿರುವ ಸರಣಿ ಹತ್ಯೆಗೆ ಜನರನ್ನು ಧರ್ಮಾಧಾರಿತವಾಗಿ ವಿಭಜಿಸಿ ಆಡಳಿತ ಮಾಡುವ ಬಿಜೆಪಿ ಸರಕಾರದ ಹಾಗೂ ಸಂಘ ಪರಿವಾರದ ಕೋಮುನೀತಿಯೇ ಕಾರಣ. ಈ ಕೊಲೆಗಳಿಗೆ ಸರಕಾರದ ವೈಫಲ್ಯ ಹಾಗೂ ಪ್ರಚೋದನೆಗಳೇ ನೇರ ಕಾರಣ‌ ಎಂದು ಎಡ ಹಾಗೂ ಜಾತ್ಯಾತೀತ ಪಕ್ಷಗಳು ಆಗ್ರಹಿಸಿದೆ

ನಗರದ ಹ್ಯಾಮಿಲ್ಟನ್ ಸರ್ಕಲ್ ನಲ್ಲಿರುವ ವಿಕಾಸ ಕಚೇರಿಯಲ್ಲಿ ಸಿಪಿಐಎಂ ದ.ಕ.ಜಿಲ್ಲಾಧ್ಯಕ್ಷ ಯಾದವ ಶೆಟ್ಟಿ ಮಾತನಾಡಿ, ಸಿಎಂ ಬೊಮ್ಮಾಯಿಯವರ ಸಹಿತ ಬಿಜೆಪಿ ಜನಪ್ರತಿನಿಧಿಗಳು ಮತೀಯ ದ್ವೇಷದ ಕೊಲೆಗಳಿಗೆ ಸಂಬಂಧಿಸಿ ತನಿಖೆ, ಸಾಂತ್ವನ ಹಾಗೂ ಪರಿಹಾರ ವಿತರಣೆ ವಿಚಾರದಲ್ಲಿ ತಾರತಮ್ಯ ಎಸಗಿರುವುದು ಖಂಡನೀಯ. ಆದ್ದರಿಂದ ಹತ್ಯೆಯಾದವರ ಮೂರೂ ಕುಟುಂಬಗಳಿಗೆ ಸಮಾನ ಪರಿಹಾರ ವಿತರಣೆ, ತನಿಖೆಗೆ ವಿಶೇಷ ತನಿಖಾ ತಂಡದ ರಚಿಸಬೇಕೆಂದು ಹೇಳಿದರು.

ಜಿಲ್ಲೆಯಲ್ಲಿ ಚುನಾವಣಾ ಪೂರ್ವ ಹತ್ಯೆ ನಡೆಯುವುದು ಸಂಪ್ರದಾಯ ಎಂಬಂತಾಗಿದೆ. ಈ ಬಾರಿಯು ಜನಸಾಮಾನ್ಯರಿಗೆ ಹತ್ಯೆಗಳಾಗುವ ಕುರಿತು ಆತಂಕ ಇತ್ತು. ಅದೀಗ ನಿಜವಾಗಿದೆ. ಕೋಮು ವೈಷಮ್ಯದ ಹಿಂಸೆ, ಕೊಲೆಗಳು ನಡೆದಾಗ ಸರಕಾರ ನ್ಯೂಟ್ರಲ್ ಆಗಿ ಕ್ರಮಗಳನ್ನು ಜರುಗಿಸಬೇಕು.‌ ಆದರೆ ಸಿಎಂ ಬೊಮ್ಮಾಯಿ ನೇತೃತ್ವದ ಸರಕಾರ ತಮ್ಮ ಬಹುಸಂಖ್ಯಾತ ಕೋಮುವಾದದ ಪರ ನಿಂತು ಕ್ರಮಗಳನ್ನು ಜರುಗಿಸಿರುವುದು ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ನಿರ್ಲಜ್ಜ ಅಧ್ಯಾಯ. ಇನ್ನಾದರೂ ಸಂತ್ರಸ್ತ ಮುಸ್ಲಿಂ ಕುಟುಂಬಗಳನ್ನು ಭೇಟಿಯಾಗಿ ಪರಿಹಾರ ಧನ ವಿತರಿಸಬೇಕು. ಮೂರೂ ಕೊಲೆಗಳ ತನಿಖೆಗೆ ಹಿರಿಯ ಅಧಿಕಾರಿಗಳ ನೇತೃತ್ವದದ ವಿಶೇಷ ತನಿಖಾ ತಂಡ ನೇಮಿಸಬೇಕು ಎಂದು ಯಾದವ ಶೆಟ್ಟಿ ಆಗ್ರಹಿಸಿದ್ದಾರೆ.

Edited By : Vijay Kumar
Kshetra Samachara

Kshetra Samachara

01/08/2022 11:39 pm

Cinque Terre

6.44 K

Cinque Terre

0

ಸಂಬಂಧಿತ ಸುದ್ದಿ