ವಿಟ್ಲ: ದ.ಕ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ ನೀಡಿದ ಸಂಜೆ ಗಂಟೆ ನಂತರ ಅಂಗಡಿ ಮುಂಗಟ್ಟು ಬಂದ್ ಆದೇಶದ ಹಿನ್ನೆಲೆಯಲ್ಲಿ ವಿಟ್ಲದ ಪೇಟೆಯ ಎಲ್ಲ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದೆ.
ಸಂಜೆ 6 ಗಂಟೆ ಆಗುತ್ತಿದ್ದಂತೆ ವಿಟ್ಲ ಬಹುತೇಕ ವರ್ತಕರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ ಮನೆಗೆ ತೆರಳಿದ್ದಾರೆ. ಜಿಲ್ಲಾಧಿಕಾರಿ ಆದೇಶ ಹೊರಡಿಸಿದಂತೆ ಸಂಜೆ 4 ಗಂಟೆಯಿಂದಲೇ ಪೇಟೆಯಲ್ಲಿ ವಾಹನ ಸಂಚಾರ ಹೆಚ್ಚಾಗಿದ್ದು, ಜನರ ಸಂಖ್ಯೆಯೂ ಹೆಚ್ಚಾಗಿತ್ತು. ಅಗತ್ಯ ವಸ್ತುಗಳನ್ನು ಖರೀದಿಸಿ ಜನರು ಮನೆ ಸೇರಿಕೊಳ್ಳುವ ಅವಸರದಲ್ಲಿದ್ದರು. ಸಂಜೆ ಆರು ಬಳಿಕ ಎಲ್ಲವೂ ಬಂದ್ ಆಗಿದ್ದು, ಬಸ್ ಸಂಚಾರವೂ ಸ್ಥಗಿತಗೊಂಡಿದೆ.
Kshetra Samachara
29/07/2022 07:16 pm