ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಬಿದ್ರಿ: ಪೊಲೀಸರಿಂದ ಗಾಂಜಾ, ಚರಸ್ ಸಹಿತ ವಿವಿಧ ಮಾದಕ ದ್ರವ್ಯ ನಾಶ

ಪಡುಬಿದ್ರಿ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ವಶ ಪಡಿಸಿಕೊಳ್ಳಲಾದ ಗಾಂಜಾ, ಚರಸ್ ಮೊದಲಾದ ಮಾದಕ ವಸ್ತುಗಳನ್ನು ಪಡುಬಿದ್ರಿ ಠಾಣಾ ವ್ಯಾಪ್ತಿಯ ನಂದಿಕೂರು ಇಂಡಸ್ಟ್ರಿಯಲ್ ಏರಿಯಾದಲ್ಲಿ ನಾಶಗೊಳಿಸಲಾಯಿತು.

ಜಿಲ್ಲೆಯ ವಿವಿಧ 19 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ವಶಪಡಿಸಿಕೊಂಡ ಅಂದಾಜು 2,72,135 ಮೌಲ್ಯದ 9 ಕೆಜಿ 686 ಗ್ರಾಂ ಗಾಂಜಾ ಹಾಗೂ ಅಂದಾಜು 55 ಸಾವಿರ ಮೌಲ್ಯದ 410 ಗ್ರಾಂ ಚರಸ್ ಒಟ್ಟಾರೆ ಅಂದಾಜು 3,27,135 ಮೌಲ್ಯದ ಮಾದಕ ವಸ್ತುಗಳನ್ನು ಜಿಲ್ಲಾ ಡ್ರಗ್ಸ್ ವಿಲೇವಾರಿ ಸಮಿತಿಯ ಅಧ್ಯಕ್ಷ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ, ಸಮಿತಿ ಸದಸ್ಯರಾದ ಉಡುಪಿ ಡಿವೈಎಸ್ಪಿ ಸುಧಾಕರ್ ಸದಾನಂದ ನಾಯ್ಕ, ಕಾರ್ಕಳ ಡಿವೈಎಸ್ಪಿ ಎನ್. ವಿಜಯ ಪ್ರಸಾದ್ ಸಮ್ಮುಖದಲ್ಲಿ ನಾಶಗೊಳಿಸಲಾಯಿತು.

ಮಣಿಪಾಲ ಹಾಗೂ ಸೆನ್ ಅಪರಾಧ ಠಾಣೆಯ ತಲಾ 4 ಪ್ರಕರಣ, ಕುಂದಾಪುರ ಹಾಗೂ ಕಾಪು ಠಾಣೆಯ ತಲಾ 3 ಪ್ರಕರಣಗಳು, ಕೋಟ ಹಾಗೂ ಗಂಗೊಳ್ಳಿ ಠಾಣೆಯ ತಲಾ 2 ಪ್ರಕರಣ ಹಾಗೂ ಮಲ್ಪೆ ಠಾಣೆಯಿಂದ 1 ಪ್ರಕರಣ ಹೀಗೆ ಒಟ್ಟು 19 ಪ್ರಕರಣಗಳಲ್ಲಿ ಈ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿತ್ತು.

Edited By : Nagesh Gaonkar
Kshetra Samachara

Kshetra Samachara

27/06/2022 09:00 am

Cinque Terre

8.37 K

Cinque Terre

1

ಸಂಬಂಧಿತ ಸುದ್ದಿ