ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅಂತಾರಾಷ್ಟ್ರೀಯ ಡ್ರಗ್ಸ್‌ ವಿರೋಧಿ ದಿನಾಚರಣೆ; ಮಾದಕ ದ್ರವ್ಯ ನಿರ್ಮೂಲನೆ

ಮುಲ್ಕಿ: ಅಂತಾರಾಷ್ಟ್ರೀಯ ಮಾದಕ ದ್ರವ್ಯ ಮತ್ತು ಅಕ್ರಮ ಕಳ್ಳ ಸಾಗಣೆ ವಿರೋಧಿ ದಿನದ ಅಂಗವಾಗಿ ಮಂಗಳೂರು ನಗರದ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ವಿಲೇವಾರಿಯು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ನೇತೃತ್ವದಲ್ಲಿ ಮುಲ್ಕಿಯ ಕೈಗಾರಿಕಾ ಪ್ರದೇಶದ ರಾಮ್ಕಿ ಎನರ್ಜಿ ಮತ್ತು ಎನ್ವಯರ್‌ ಮೆಂಟ್‌ ನಲ್ಲಿ ನಡೆಯಿತು.

ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲೆಯ ಕಮಿಷನರೇಟ್ ವ್ಯಾಪ್ತಿಯ 15 ಠಾಣೆಗಳ ಒಟ್ಟು 97 ಪ್ರಕರಣಗಳಲ್ಲಿ ಸ್ವಾಧೀನ ಪಡಿಸಿಕೊಳ್ಳಲಾದ 580 ಕೆಜಿ 860 ಗ್ರಾಮ್ ಗಾಂಜಾ, 25 ಗ್ರಾಮ್ ಹೆರಾಯಿನ್ ಮತ್ತು 320 ಗ್ರಾಂ ಎಂಡಿಎಂಎ ಮಾದಕ ವಸ್ತುಗಳನ್ನು ವಿಲೇವಾರಿ ಮಾಡಲಾಯಿತು.

ಈ ಸಂದರ್ಭ ಪೊಲೀಸ್ ಅಧಿಕಾರಿಗಳಾದ ಡಿಸಿಪಿ ಹರಿರಾಮ್ ಶಂಕರ್, ದಿನೇಶ್ ಕುಮಾರ್, ಗೀತಾ ಕುಲಕರ್ಣಿ, ದಿನಕರ ಶೆಟ್ಟಿ, ಪರಮೇಶ್ವರ್ ಹೆಗ್ಡೆ, ಮುಲ್ಕಿ ಇನ್‌ ಸ್ಪೆಕ್ಟರ್ ಕುಸುಮಾಧರ ಮತ್ತಿತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

26/06/2022 04:00 pm

Cinque Terre

16.84 K

Cinque Terre

0

ಸಂಬಂಧಿತ ಸುದ್ದಿ