ಸುಳ್ಯ: ಬ್ಯಾಂಕ್ ಸಾಲ ಇನ್ನಿತರ ಪ್ರಕರಣಗಳಿಂದ ಬಂದ ವಸೂಲಾತಿ ಮೊತ್ತ 53 ಲಕ್ಷಕ್ಕೂ ಅಧಿಕ ರೂಪಾಯಿ 39 ಮಂದಿ ಒಳಗೊಂಡ 30 ವರ್ಷ ಹಳೆಯದಾದ ಜಮೀನಿಗೆ ಸಂಬಂಧಿಸಿದ ಸಮಸ್ಯೆ ಇತ್ಯರ್ಥ ಜೂ.25 ರಂದು ರಾಜ್ಯದಾದ್ಯಂತ ನಡೆದ ರಾಷ್ಟ್ರೀಯ ಮೆಗಾ ಲೋಕ ಅದಾಲತ್ ಕಾರ್ಯಕ್ರಮದ ಅಂಗವಾಗಿ ಸುಳ್ಯ ನ್ಯಾಯಾಲಯದಲ್ಲಿಯೂ ಮೆಗಾ ಲೋಕ ಅದಾಲತ್ ಕಾರ್ಯಕ್ರಮ ನಡೆಯಿತು.
ಸುಳ್ಯ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಎ ರವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಿರಿಯ ನ್ಯಾಯಾಲಯದಿಂದ 124 ಪ್ರಕರಣಗಳು ಇದರಲ್ಲಿ 42 ಸಿವಿಲ್ ಪ್ರಕರಣ ಹಿರಿಯ ನ್ಯಾಯಾಲಯದ ವ್ಯಾಪ್ತಿಯಲ್ಲಿ 210 ಪ್ರಕರಣಗಳು ಇದರಲ್ಲಿ 32 ಸಿವಿಲ್ ಪ್ರಕರಣಗಳು ಇತ್ಯರ್ಥದಲ್ಲಿ ಇತ್ಯರ್ಥಗೊಂಡಿದೆ.
ಎಲ್ಲಾ ಪ್ರಕರಣಗಳಲ್ಲಿ ಬ್ಯಾಂಕ್ ಸಾಲದ ವಸೂಲಾತಿ ಸೇರಿದಂತೆ ವಿವಿಧ ಪ್ರಕರಣಗಳಿಂದ ಒಟ್ಟು 5314953.00 ರೂಪಾಯಿಗಳ ಮೊತ್ತ ವಸುಲಾತಿ ಗೊಂಡಿರುತ್ತದೆ. ಇಂದಿನ ಲೋಕ್ ಅದಾಲತ್ ಕಾರ್ಯಕ್ರಮದಲ್ಲಿ ವಿಶೇಷವಾಗಿ ಎಣ್ಮೂರು ಗ್ರಾಮದ ಹೇಮಳ ಪರಿಸರದ ರತ್ನಾವತಿ ಎಂಬುವವರ ಜಾಗಕ್ಕೆ ಸಂಬಂಧಿಸಿದ ಮೂವತ್ತು ವರ್ಷಗಳಿಂದ ಸಮಸ್ಯೆಯಲ್ಲಿ ಇದ್ದ ಪ್ರಕರಣ 39 ಮಂದಿ ಕಕ್ಷಿದಾರರ ಸಮ್ಮುಖದಲ್ಲಿ ಇತ್ಯರ್ಥಗೊಂಡಿದೆ ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರಾದ ಕೇಶವ ಭೀಮಗುಳಿ, ಮಹೇಶ್ ಎನ್ ಇತ್ಯರ್ಥಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದಿನ ಲೋಕ ಅದಾಲತ್ ಕಾರ್ಯಕ್ರಮದ ಇತ್ಯರ್ಥಪಡಿಸುವ ವಿಭಾಗದಲ್ಲಿ ಸಂಧಾನಕಾರರಾಗಿ ಹಿರಿಯ ವಕೀಲರಾದ ರವೀಂದ್ರನಾಥ ರೈ ಕೆ, ನಳಿನ್ ಕುಮಾರ್ ಕೊಡ್ತು ಗೂಳಿ, ಸುಳ್ಯ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ಜನಾರ್ದನ್ ಬಿ, ಸುಳ್ಯ ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ ಭಾಗವಹಿಸಿದ್ದರು.
ವಕೀಲರ ಸಂಘದ ಅಧ್ಯಕ್ಷ ನಾರಾಯಣ ಕೆ ಇಂದು ನಡೆದ ಮೆಗಾ ಲೋಕ್ ಅದಾಲತ್ ನಲ್ಲಿ ಸುಳ್ಯ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಸೋಮಶೇಖರ್ ಎ, ಹಾಗೂ ಎಲ್ಲಾ ಹಿರಿಯ ಕಿರಿಯ ವಕೀಲರುಗಳು, ಎಪಿಪಿ ಜನಾರ್ದನ್ ರವರು, ನ್ಯಾಯಾಲಯದ ಸಿಬ್ಬಂದಿ ವರ್ಗದವರು, ಕಕ್ಷಿದಾರರು ಸಂಪೂರ್ಣವಾಗಿ ಸಹಕರಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಹೇಳಿದರು.ಮುಂದಿನ ದಿನಗಳಲ್ಲಿ ಲೋಕ ಅದಾಲತ್ ಕಾರ್ಯಕ್ರಮಗಳು ಬಂದಾಗ ಫಲಾನುಭವಿಗಳು ಇದರ ಪ್ರಯೋಜನವನ್ನು ಪಡೆದುಕೊಂಡು ಉತ್ತಮ ಜೀವನ ನಿರ್ವಹಿಸಿ ಕೊಳ್ಳಬೇಕು ಎಂದು ಹೇಳಿದರು.
Kshetra Samachara
25/06/2022 08:58 pm