ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಳಲಿ ಮಸೀದಿ ವಿವಾದ ಕೇಸ್‌; ಇಂದು ಮತ್ತೆ ವಿಚಾರಣೆ ಆರಂಭ

ಮಂಗಳೂರು: ನಗರದ ಹೊರವಲಯದಲ್ಲಿರುವ ಮಳಲಿ ಮಸೀದಿ ವಿವಾದ ಪ್ರಕರಣದಲ್ಲಿ ಇಂದು ಮತ್ತೆ ವಿಚಾರಣೆ ಆರಂಭವಾಗಿದೆ.

ಜಿಲ್ಲಾ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ವಿಎಚ್‌ಪಿ ಹಾಗೂ ಮಳಲಿ ಮಸೀದಿ ಆಡಳಿತ ಮಂಡಳಿಯ ನಡುವಿನ ವಿವಾದದ ಹಿನ್ನೆಲೆಯಲ್ಲಿ ವಿಚಾರಣೆ ನಡೆಯುತ್ತಿದೆ. ಜೂನ್ 1ರಂದು ಎರಡನೇ ದಿನದ ವಿಚಾರಣೆ ನಡೆದು, ಎರಡು ಕಡೆಯ ವಾದ ವಿವಾದವನ್ನು ಆಲಿಸಿದ ನ್ಯಾಯಾಲಯ ಇಂದಿಗೆ ವಿಚಾರಣೆ ಮುಂದೂಡಿಕೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11.01ಕ್ಕೆ ವಿಚಾರಣೆ ಆರಂಭವಾಗಿದೆ. ಎರಡೂ ಕಡೆಯ ವಕೀಲರು ವಾದವನ್ನು ಮಂಡಿಸಲಿದ್ದಾರೆ.

Edited By : Vijay Kumar
Kshetra Samachara

Kshetra Samachara

06/06/2022 12:40 pm

Cinque Terre

3.47 K

Cinque Terre

0