ಮಂಗಳೂರು: ನಗರದ ಮಂಗಳೂರು ಮಳಲಿ ಮಸೀದಿ - ಮಂದಿರ ವಿವಾದದ ಹಿನ್ನೆಲೆಯಲ್ಲಿ ಜಿಲ್ಲಾ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ಎರಡನೇ ದಿನವಾದ ಇಂದು ವಿಚಾರಣೆ ನಡೆಯಿತು. ಎರಡು ಕಡೆಯ ವಾದ ವಿವಾದವನ್ನು ಆಲಿಸಿದ ನ್ಯಾಯಾಲಯವು ಜೂ.6 ಕ್ಕೆ ವಿಚಾರಣೆ ಮುಂದೂಡಿತು.
ಮಧ್ಯಾಹ್ನದ ಬಳಿಕ ಈ ಬಗ್ಗೆ ಜಿಲ್ಲಾ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಯಿತು. ಮೊದಲಾಗಿ ವಿ.ಎಚ್.ಪಿ ಪರ ವಕೀಲರು ವಾದ ಮಂಡನೆ ಮಾಡಿ, ಇಸ್ಲಾಂ ಧರ್ಮದ ಪ್ರಕಾರ ಎಲ್ಲಿ ಬೇಕಾದರೂ ಮಾಡಬಹುದು. ಆದ್ದರಿಂದ ತಕ್ಷಣ ಸರ್ವೇ ಮಾಡಲು ನ್ಯಾಯಾಲಯ ಆದೇಶಿಸಬೇಕು. ಜ್ಞಾನವಾಪಿಯಂತೆಯೇ ಮಳಲಿ ದರ್ಗಾವನ್ನು ಗಣನೆಗೆ ತೆಗೆದುಕೊಳ್ಳಬೇಕು. ಜ್ಞಾನವಾಪಿಯಂತೆಯೇ ಮಳಲಿ ದರ್ಗಾದಲ್ಲಿಯೂ ವೀಡಿಯೋ ಚಿತ್ರೀಕರಣ ಮಾಡಬೇಕೆಂದು ವಾದ ಮಂಡಿಸಿದರು.
ಆದರೆ ಮಳಲಿ ಮಸೀದಿ ಸ್ಥಳದ ಸರ್ವೇ ಮನವಿಗೆ ಮಸೀದಿ ಕಮಿಟಿಯ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ವಿ.ಎಚ್.ಪಿ ಪರ ವಕೀಲರ ಮನವಿ ಪುರಸ್ಕರಿಸದಂತೆ ವಾದ ಮಂಡಿಸಿದರು.ಮಳಲಿ ಮಸೀದಿಗೆ ನೂರಾರು ವರ್ಷಗಳ ಇತಿಹಾಸವಿದೆ. ಇಲ್ಲಿ ಹಲವಾರು ವರ್ಷಗಳಿಂದ ಮುಸ್ಲಿಮರು ಪ್ರಾರ್ಥನೆ ಮಾಡುತ್ತಾ ಬರುತ್ತಿದ್ದಾರೆ. ಅಲ್ಲದೆ ಈ ಸ್ಥಳದಲ್ಲಿ ದಫನ ಭೂಮಿ ಇದ್ದು, ಅದಕ್ಕೆ ಎಲ್ಲದಕ್ಕೂ ದಾಖಲೆಗಳೀ ಇದೆ ಎಂದರು.
ಇದೋಗ ಸ್ಥಳೀಯ ಪಂಚಾಯತ್ ನ ಅನುಮತಿ ಪಡೆದು ನವೀಕರಣ ಮಾಡಲಾಗುತ್ತಿತ್ತು. ಕೇವಲ ವಾಸ್ತುಶಿಲ್ಪ ಹಿಂದೂ ದೇವಸ್ಥಾನದಂತಿದೆ ಅನ್ನುಬಯ ವಾದ ಸರಿಯಲ್ಲ ಇದು ವಕ್ಫ್ ಆಸ್ತಿ, ಸರ್ಕಾರದ ದಾಖಲೆಯಲ್ಲೂ ಇದರ ಉಲ್ಲೇಖವಿದೆ. ಮಳಲಿ ಮಸೀದಿಯನ್ನು ಜ್ಞಾನವಾಪಿ ಪ್ರಕರಣಕ್ಕೆ ಹೋಮಂಗಳೂರುಡೋದು ಸರಿಯಲ್ಲ. ಕೋರ್ಟ್ ಕಮಿಷನರ್ ನೇಮಿಸಿ ಸರ್ವೇ ಮಾಡುವ ಮನವಿಯನ್ನು ತಿರಸ್ಕರಿಸಬೇಕು ಎಂದು ನ್ಯಾಯಾಲಯಕ್ಕೆ ಮಸೀದಿ ಪರ ವಕೀಲ ಎಂ.ಪಿ.ಶೆಣೈ ಮನವಿ ಮಾಡಿದರು. ವಾದ ವಿವಾದವನ್ನು ಆಲಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಿದರು.
PublicNext
01/06/2022 05:33 pm