ಮಂಗಳೂರು:ಮನವಿ ನೀಡಲು ನಮ್ಮ ಕಚೇರಿಗೆ ಬರುವವರ ಜೊತೆ ಮಾತುಕತೆ ನಡೆಸುವುದು ಸಹಜ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮಂಗಳೂರು ನಗರ ಕಮಿಷನರೇಟ್ ಕಚೇರಿಯಲ್ಲಿ ಇತ್ತೀಚಿಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೆ ಆತಿಥ್ಯ ನೀಡಲಾಗಿದೆ ಎಂಬ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಕಮಿಷನರ್ ಈ ರೀತಿ ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರು ನಗರದಲ್ಲಿರೋ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಾತನಾಡಿದ ಅವರು, ಮಳಲಿ ಮಸೀದಿ ವಿಚಾರವಾಗಿ ಚರ್ಚೆ ಮಾಡಲು ಪ್ರಮೋದ್ ಮುತಾಲಿಕ್ ಕಚೇರಿಗೆ ಬಂದಿದ್ದರು. ಆ ಪ್ರದೇಶವನ್ನು ಪ್ರವೇಶಿಸಲು ಅವರು ಅನುಮತಿ ಕೇಳಿದ್ದರು.
ಮುತಾಲಿಕ್ ಮತ್ತವರ ಬೆಂಬಲಿಗರು ಮಳಲಿಗೆ ಭೇಟಿ ನೀಡುತ್ತಾರೆ ಎನ್ನುವ ಮಾಹಿತಿ ಇತ್ತು. ಮುತಾಲಿಕ್ ಅಲ್ಲಿಗೆ ಹೋದರೆ ಅಹಿತಕರ ಘಟನೆ ಉಂಟಾಗುವ ಸಂಭವ ಇತ್ತು. ಹೀಗಾಗಿ ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು ಎಂದು ಕಮಿಷನರ್ ತಿಳಿಸಿದ್ದಾರೆ. ಮಧ್ಯಾಹ್ನ 2.30ರ ವೇಳೆಗೆ ಅವರು ಕಚೇರಿಗೆ ಆಗಮಿಸಿದ್ದರು. ನಾವು ಕಚೇರಿಯಿಂದ ಹೊರಡುವ ಸಮಯದಲ್ಲಿ ಆ ಫೋಟೋ ಕ್ಲಿಕ್ಕಿಸಲಾಗಿತ್ತು. ಇದನ್ನೇ ನಿರ್ದಿಷ್ಟ ಪಕ್ಷ, ಸಂಘಟನೆಗೆ ಸೇರಿದವರು ಅಪಪ್ರಚಾರ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರವನ್ನು ತಪ್ಪಾಗಿ ಬಿಂಬಿಸಲಾಗಿದೆ. ಇದನ್ನು ಶೇರ್ ಮಾಡಿದವರು ಪ್ರತಿನಿಧಿಸುವ ಪಕ್ಷದ ಪದಾಧಿಕಾರಿಗಳು ಇಲ್ಲಿಗೆ ಆಗಮಿಸುತ್ತಾರೆ ಎಂದು ಪೊಲೀಸ್ ಕಮಿಷನರ್ ಪ್ರತಿಕ್ರಿಯಿಸಿದರು.
Kshetra Samachara
09/05/2022 11:18 pm