ಮಂಗಳೂರು: ತಾಲಿಬಾನ್ ಸಂಸ್ಕೃತಿ ಹೇರಲು ಮಂಗಳೂರಿನಲ್ಲಿ ಸ್ವಯಂಘೋಷಿತ ಮುಸ್ಲಿಂ ಸಂಘಟನೆಯೊಂದು ಹವಾ ಸೃಷ್ಠಿಸಲು ಯತ್ನ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಎಂಡಿಎಫ್ ಅಂದ್ರೆ ಮುಸ್ಲಿಂ ಡಿಫೆನ್ಸ್ ಫೋರ್ಸ್ ಹೆಸರಿನಲ್ಲಿ ನಿಗೂಢವಾಗಿ ಕಾರ್ಯಾಚರಿಸುತ್ತಿರುವ ಸಂಘಟನೆಯಾಗಿದೆ. ಇದು
ಹಿಜಾಬ್ , ಬುರ್ಖಾ ಧರಿಸಿ ಹೊರಬರುವ ಯುವತಿಯರ ಮೇಲೆ ಕಣ್ಣಿಡಲಿದೆ. ನೈತಿಕ ಪೊಲೀಸ್ ಗಿರಿ ನಡೆಸಲು ಮುಂದಾಗಿರುವ ಈ ಸಂಘಟನೆಯು ಬುರ್ಖಾ ಧರಿಸಿ ಅಸಭ್ಯವಾಗಿ ವರ್ತಿಸುವ ಯುವತಿಯರನ್ನು ಟಾರ್ಗೆಟ್ ಮಾಡುವ ಎಚ್ಚರಿಕೆ ನೀಡಿದೆ.
ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆಯ ಸಂದೇಶ ಹರಿಬಿಡುತ್ತಿರುವ ಮುಸ್ಲಿಂ ಡಿಫೆನ್ಸ್ ಫೋರ್ಸ್ , ಹಿಜಾಬ್ , ಬುರ್ಖಾ ಧರಿಸಿ ಮನೆಯಿಂದ ಹೊರಬರುವ ಯುವತಿಯರ ಮೇಲೆ ಕಣ್ಣಿಡುವಂತೆ ಪೋಷಕರಿಗೆ ಎಚ್ಚರಿಕೆ ನೀಡಿದೆ.
ಬುರ್ಖಾ ಧರಿಸಿ ಯುವಕರೊಂದಿಗೆ ಪಾರ್ಕ್ , ಮಾಲ್ , ಥಿಯೇಟರ್ ಸುತ್ತುವ ಯುವತಿಯರನ್ನು ಟಾರ್ಗೆಟ್ ಮಾಡುವ ಬೆದರಿಕೆ ಹಾಕಿರುವ ಈ ಸಂಘಟನೆಯ ಜಾಲವನ್ನು ಭೇದಿಸಲು ಮಂಗಳೂರು ಪೊಲೀಸರು ಮುಂದಾಗಿದ್ದಾರೆ. ಬುರ್ಖಾ , ಹಿಜಾಬ್ ಧರಿಸಿ ಮಾಲ್ ಹೋಟೆಲ್ ಸಾರ್ವಜನಿಕ ಜಾಗದಲ್ಲಿ ಹುಡುಗರೊಂದಿಗೆ ಓಡಾಡುವಂತಿಲ್ಲ. ಮಂಗಳೂರಿನಲ್ಲಿ ಮುಸ್ಲಿಂ ಸಂಘಟನೆಯೊಂದರಿಂದ ತಾಲಿಬಾನ್ ರೀತಿಯ ಫತ್ವಾ ಹೊರಡಿಸಿರೋ ಈ ಸಂಘಟನೆಯು ಮುಸ್ಲಿಂ ಡಿಫೆನ್ಸ್ ಫೋರ್ಸ್ ಹೆಸರಿನಲ್ಲಿ ಕಾರ್ಯಾಚರಿಸುತ್ತಿದೆ. ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ನೈತಿಕ ಪೊಲೀಸ್ ಗಿರಿ ನಡೆಸುವ ಬೆದರಿಕೆ ಒಡ್ಡಿದೆ ಈ ಎಂಡಿಎಫ್.ಅಷ್ಟೇ ಅಲ್ಲ, ಇದು ಹಿಂದೂ ಸಂಘಟನೆಗಳಿಗೂ ಬೆದರಿಕೆಯೊಡ್ಡಿದೆ.
ಹೀಗಾಗಿ ಮುಸ್ಲಿಮ್ ಡಿಫೆನ್ಸ್ ಫೋರ್ಸ್ ಹಾಗು ಮಂಗಳೂರು ಮುಸ್ಲಿಂ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ಇಡಲು ಪ್ರತ್ಯೇಕ ತಂಡ ರಚನೆ ಮಾಡಿದೆ. ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ 6 ಪೊಲೀಸ್ ಅಧಿಕಾರಿಗಳ ತಂಡ ರಚಿಸಿರುವ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ.
ಕಳೆದ 3 ವರ್ಷಗಳಿಂದ ನಾನಾ ಪ್ರಕರಣಗಳಲ್ಲಿ ಭಾಗಿಯಾದ ಸಂಘಟನೆ, ವ್ಯಕ್ತಿಗಳ ಮೇಲೆ ತೀವ್ರ ನಿಗಾ ಇಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ 1600 ಕ್ಕೂ ಖಾತೆಗಳ ಮೇಲೆ ನಿಗಾ ಇಡಲಾಗಿದೆ.
PublicNext
05/05/2022 06:42 pm