ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಮಳಲಿಯಲ್ಲಿನ ದರ್ಗಾ ನವೀಕರಣ ವೇಳೆ ಹಿಂದೂ ದೇವಾಲಯ ಪ್ರತ್ಯಕ್ಷ!

ಮಂಗಳೂರು: ನಗರದ ಹೊರವಲಯದಲ್ಲಿರುವ ಮಳಲಿಯಲ್ಲಿರುವ ದರ್ಗಾದ ನವೀಕರಣ ಮಾಡುವ ವೇಳೆ ದೇವಾಲಯವೊಂದು ಪತ್ತೆಯಾಗಿರುವ ಘಟನೆ ನಡೆದಿದೆ. ಸದ್ಯ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತಹಶೀಲ್ದಾರ್ ಸೂಚನೆ ನೀಡಿದ್ದಾರೆ.

ಗಂಜಿಮಠದ ಬಳಿಯ ಮಳಲಿಯಲ್ಲಿರುವ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ದರ್ಗಾದ ಮುಂಭಾಗವನ್ನು ನವೀಕರಣಕ್ಕಾಗಿ ಕೆಡವಲಾಗಿತ್ತು. ಆಗ ಅಲ್ಲಿ ಹಿಂದೂ ಶೈಲಿಯ ದೇವಸ್ಥಾನದ ಗುಡಿ ಪತ್ತೆಯಾಗಿದೆ‌. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರು ತಹಶೀಲ್ದಾರ್ ಪುರಂದರ್​ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದೇ ವೇಳೆ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್​ವೆಲ್ ನೇತೃತ್ವದಲ್ಲಿ ಕಾರ್ಯಕರ್ತರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇದೀಗ ನವೀಕರಣ ಕಾಮಗಾರಿ ಸ್ಥಗಿತಗೊಂಡಿದೆ. ಇದೀಗ ಈ ಸ್ಥಳಕ್ಕೆ ಪೊಲೀಸ್ ಇಲಾಖೆ ಅಗತ್ಯ ಬಂದೋಬಸ್ತ್ ಮಾಡಿದೆ.

Edited By : Nagesh Gaonkar
PublicNext

PublicNext

21/04/2022 10:31 pm

Cinque Terre

84.5 K

Cinque Terre

28

ಸಂಬಂಧಿತ ಸುದ್ದಿ