ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ: ಕರ್ಫ್ಯೂ ಉಲ್ಲಂಘನೆ ಪ್ರಕರಣಕ್ಕೆ ಸಿಕ್ತು ಮುಕ್ತಿ !

ಕುಂದಾಪುರ:ಕೊರೊನಾ ಮೊದಲ ಅಲೆಯ ಲಾಕ್ ಡೌನ್ ಸಂದರ್ಭ ಕುಂದಾಪುರದ ಎಂಜಿನಿಯರಿಂಗ್ ವಿದ್ಯಾರ್ಥಿ ವಿರುದ್ಧ ಕರ್ಫ್ಯೂ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು.

ಆದರೆ ಇದೀಗ ಆ ಪ್ರಕರಣ ಸಂಬಂಧ ಹೈಕೋರ್ಟ್ ಕೆಳ ನ್ಯಾಯಾಲಯದ ತೀರ್ಪುನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ವಿಶ್ವನಾಥ್ ಎನ್ನುವ ವಿದ್ಯಾರ್ಥಿ ಲಾಕ್ ಡೌನ್ ಕಾರಣ ಊರಿಗೆ ಬಂದಿದ್ದ, ಈ ಸಮಯ ಔಷಧ ತರಲೆಂದು ಮೆಡಿಕಲ್ ಗೆ ಹೋಗಿದ್ದು ಮಾಸ್ಕ್ ಹಾಕದ ಕಾರಣಕ್ಕೆ ಪೊಲೀಸರು 2020 ಮಾ.26 ರಂದು ಪ್ರಕರಣ ದಾಖಲಿಸಿ ಹಲ್ಲೆ ನೆಡೆಸಿದ್ದರು.

ಈ ಪ್ರಕರಣ ಸಂಬಂಧ ಹೈ ಕೋರ್ಟ್ ನ್ಯಾಯವಾದಿ ಪವನ್ ಚಂದ್ರ ಶೆಟ್ಟಿ ಮೇಲ್ಮನವಿ ಸಲ್ಲಿಸಿ ವಿದ್ಯಾರ್ಥಿ ಪರವಾಗಿ ವಾದ ಮಂಡಿಸಿದರು. ಹೈಕೋರ್ಟ್ ನ್ಯಾಯಧೀಶ ನಾಗಪ್ರಸನ್ನ ಎಫ್. ಐ. ಆರ್, ಚಾರ್ಜ್ ಶೀಟ್ಗಳನ್ನು ವಜಾಗೊಳಿಸಿ ತೀರ್ಪು ನೀಡಿದೆ.

Edited By : PublicNext Desk
Kshetra Samachara

Kshetra Samachara

29/03/2022 12:39 pm

Cinque Terre

2.63 K

Cinque Terre

0

ಸಂಬಂಧಿತ ಸುದ್ದಿ