ಮೂಡುಬಿದಿರೆ: ಶಾಲಾ ಕಾಲೇಜುಗಳಲ್ಲಿ ಹಿಜಾಬ್‌ಗೆ ನಿರ್ಬಂಧ ವಿಧಿಸಿ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿರುವ ಮುಸ್ಲಿಂ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆಕೊಟ್ಟಿವೆ. ಈ ಹಿನ್ನಲೆಯಲ್ಲಿ ಮೂಡುಬಿದಿರೆಯಲ್ಲಿ ಮುಸ್ಲಿಂ ಸಮುದಾಯದ ದಿನಸಿ, ಬಟ್ಟೆ, ಮೊಬೈಲ್ ಅಂಗಡಿಗಳು, ಹೋಟೆಲ್, ತರಕಾರಿ ಮತ್ತು ಮೀನು, ಚಿಕನ್ ಸ್ಟಾಲ್‌ಗಳನ್ನು ಬಂದ್ ಮಾಡಿದ್ದಾರೆ.
ಮುಸ್ಲಿಮರು ನಡೆಸುತ್ತಿರುವ ಮೆಡಿಕಲ್ ಶಾಪ್‌ಗಳನ್ನೂ ಬಂದ್ ಮಾಡಲಾಗಿದೆ. ಅಲ್ಲದೆ ಆಟೋ ರಿಕ್ಷಾ, ಬಸ್ ಚಾಲಕರು ಕೂಡ ಕರ್ತವ್ಯಕ್ಕೆ ಹಾಜರಾಗದೆ ಬಂದ್‌ಗೆ ಬೆಂಬಲವನ್ನು ಸೂಚಿಸಿದ್ದಾರೆ.
Kshetra Samachara
17/03/2022 05:40 pm