ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹಿಜಾಬ್ ತೀರ್ಪು: ಮಂಗಳೂರಿನಲ್ಲಿ ಬಲವಂತದ ಬಂದ್ ನಡೆದಿಲ್ಲ: ಎನ್ ಶಶಿಕುಮಾರ್

ಮಂಗಳೂರು: ಮಂಗಳೂರಲ್ಲಿ ಎಲ್ಲೂ ಒತ್ತಾಯ ಪೂರ್ವಕವಾಗಿ ಅಂಗಡಿ ಮುಂಗಟ್ಟುಗಳಾಗಲಿ, ವಾಹನ ಸಂಚಾರ, ವ್ಯಾಪಾರ ವಹಿವಾಟು ಅಥವಾ ಶಾಲಾ ಕಾಲೇಜುಗಳನ್ನು ಬಂದ್ ಮಾಡಿಸುವ ಕೆಲಸ ಆಗಿಲ್ಲ ಎಂದು ನಗರ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಮಂಗಳೂರು ನಗರದ ಬಂದರು, ಧಕ್ಕೆ ಮೊದಲಾದ ವಿವಿಧ ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು. ಸ್ವಯಂ ಪ್ರೇರಿತವಾಗಿ ಕೆಲ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಇಂದು ತೆರೆದಿಲ್ಲ. ಕೆಲವು ವಾಹನಗಳು, ಸ್ಥಳೀಯ ಖಾಸಗಿ ಬಸ್ಸುಗಳು ಕೂಡಾ ಸಂಚಾರ ಮಾಡುತ್ತಿಲ್ಲ. ಅದು ಹೊರತುಪಡಿಸಿ ಜನಜೀವನ ಸಾಮಾನ್ಯವಾಗಿದೆ.

ಇತರ ಎಲ್ಲಾ ರೀತಿಯ ವಾಹನ ಸಂಚಾರ, ವ್ಯವಹಾರ, ಶಾಲಾ ಕಾಲೇಜು, ಸರಕಾರಿ ಮತ್ತು ಖಾಸಗಿ ಕಚೇರಿಗಳು ಕಾರ್ಯಾಚರಿಸುತ್ತಿದೆ ಎಂದರು. ಹಿಜಾಬ್ ಕುರಿತಂತೆ ನ್ಯಾಯಾಲಯದಿಂದ ತೀರ್ಪು ಪ್ರಕಟವಾದ ಬಳಿಕ ಬುಧವಾರದಿಂದ ಮಂಗಳೂರಲ್ಲಿ ಶಾಲಾ-ಕಾಲೇಜುಗಳು ಯಾವುದೇ ಗೊಂದಲವಿಲ್ಲದೆ ತನ್ನ ಕಾರ್ಯಚಟುವಟಿಕೆಗಳನ್ನು ಆರಂಭಿಸಿವೆ ಎಂದರು.

Edited By : Manjunath H D
Kshetra Samachara

Kshetra Samachara

17/03/2022 04:02 pm

Cinque Terre

7.68 K

Cinque Terre

0