ಕಾಪು: ಹಿಜಾಬ್-ಕೇಸರಿ ವಿವಾದದ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಕಾಪು ವೃತ್ತ ವ್ಯಾಪ್ತಿಯ ಪೊಲೀಸರು ಕಾಪು ಪೇಟೆಯಲ್ಲಿ ಶುಕ್ರವಾರ ಬೆಳಿಗ್ಗೆ ಪಥ ಸಂಚಲನ ನಡೆಸಿದರು.
ಕಾಪು ವೃತ್ತ ನಿರೀಕ್ಷಕ ಪ್ರಕಾಶ್ ನೇತೃತ್ವದಲ್ಲಿ ಕಾಪು ಎಸ್ಸೈ ರಾಘವೇಂದ್ರ ಸಿ,ಪಡುಬಿದ್ರಿ ಪಿಎಸ್ಸೈ ಅಶೋಕ್ ಕುಮಾರ್,ಶಿರ್ವಾ ಎಸ್ಸೈ ಶ್ರೀ ಶೈಲಾ , ಕಾಪು ಕ್ರೈಮ್ ಎಸ್ಸೈ ತಿಮ್ಮೇಶ್, ಶಿರ್ವ ಠಾಣಾ ಕ್ರೈಮ್ ಎಸ್ಸೈ ಪ್ರಕಾಶ್ ಸೇರಿದಂತೆ ಕಾಪು ವೃತ್ತ ವ್ಯಾಪ್ತಿಯ ಸುಮಾರು 90 ಪೊಲೀಸ್ ಸಿಬ್ಬಂದಿಗಳು ಈ ಪಥ ಸಂಚಲನದಲ್ಲಿ ಭಾಗಿಯಾಗಿದ್ದರು.
Kshetra Samachara
11/02/2022 02:02 pm