ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಬ್ರಹ್ಮಾವರದಲ್ಲಿ ನ್ಯಾಯಾಲಯ ರಚನೆಯಾಗಲಿ:ಹಿರಿಯ ವಕೀಲರುಗಳ ಅಭಿಪ್ರಾಯ

ಬ್ರಹ್ಮಾವರ: ತಾಲೂಕು ಕೇಂದ್ರ ಬ್ರಹ್ಮಾವರದಲ್ಲಿ ನ್ಯಾಯಾಲಯ ರಚನೆಯಾಗಬೇಕು ಎಂದು ಚಾಂತಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ. ನಾಗರಾಜ್‍ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ಉಡುಪಿಯ ಹಿರಿಯ ನ್ಯಾಯವಾದಿ ವಿಜಯ ಹೆಗ್ಡೆ ಮಾತನಾಡಿ, ಕರಾವಳಿ ಜಿಲ್ಲೆಯಲ್ಲಿ ಪ್ರಥಮ ನ್ಯಾಯಾಲಯ ಇದ್ದದ್ದು ಬಾರಕೂರಿನಲ್ಲಿ. ಆ ಬಳಿಕ ಕಾರ್ಕಳ ಮಂಗಳೂರು ಮತ್ತು ಉಡುಪಿಯಲ್ಲಿ ನ್ಯಾಯಾಲಯ ಆದ ಇತಿಹಾಸ ಇದೆ. ಆದ್ದರಿಂದ ಬ್ರಹ್ಮಾವರದಲ್ಲಿ ನ್ಯಾಯಾಲಯದ ಅಗತ್ಯ ಖಂಡಿತ ಇದೆ ಎಂದು ಅಭಿಪ್ರಾಯಪಟ್ಟರು.

ನ್ಯಾಯವಾದಿ ಶ್ರೀಪಾದ್ ರಾವ್ ಮತ್ತು ಕಾಡೂರು ಪ್ರವೀಣ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಸಭೆ ಜರುಗಿತು.ತಾಲೂಕು ಸಂಘಗಳ ಪದಾಧಿಕಾರಿಗಳಾದ ಕುಂದಾಪುರ ಸಂಘದ ಅಧ್ಯಕ್ಷ ನಿರಂಜನ ಹೆಗ್ಡೆ , ಕಾರ್ಕಳದ ಸುನೀಲ್ ಕುಮಾರ್ , ಉಡುಪಿಯ ರೋನಾಲ್ಡ್ ಪ್ರವೀಣ್ , ಪ್ರಮೋದ್ ಹಂದೆ , ಪದ್ಮರಾಜ್ ಜೈನ್, ಬನ್ನಾಡಿ ಸೋಮನಾಥ್ ಹೆಗ್ಡೆ , ಲಕ್ಷ್ಮಣ ಶೆಟ್ಟಿ, ಶಿರಿಯಾರ ಪ್ರಭಾಕರ ನಾಯ್ಕ್ , ಟಿ ಮಂಜುನಾಥ್ , ರಾಘವೇಂದ್ರ ನಾಯ್ಕ್ ಹಾಜರಿದ್ದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಬಳಿಕ ನ್ಯಾಯವಾದಿ ವಿಜಯ ಹೆಗ್ಡೆ ಯವರ ಮೂಲಕ ಬ್ರಹ್ಮಾವರ ವಕೀಲರ ಸಮಿತಿಯನ್ನು ರಚಿಸಿ ಕಾಡೂರು ಪ್ರವೀಣ್ ಶೆಟ್ಟಿಯವರನ್ನು ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸಂಘಟನೆ ಮುಖಂಡತ್ವವನ್ನು ನೀಡಲಾಯಿತು.

Edited By : Manjunath H D
Kshetra Samachara

Kshetra Samachara

02/02/2022 05:44 pm

Cinque Terre

5.22 K

Cinque Terre

0

ಸಂಬಂಧಿತ ಸುದ್ದಿ