ಮಂಗಳೂರು: ಎರಡು ವರ್ಷಗಳಲ್ಲಿ ನಾನಾ ಲಾಕ್ ಡೌನ್ ನಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಯಾವುದೇ ಒಂದು ತೀರ್ಮಾನ ತೆಗೆದುಕೊಳ್ಳುವಾಗ ಜಿಲ್ಲಾಡಳಿತ ಯೋಚಿಸಬೇಕು. ಶನಿವಾರ, ರವಿವಾರ ವೀಕೆಂಡ್ ಕರ್ಫ್ಯೂ ಹೇರಲಾಗಿದೆ. ಈ ಎರಡು ದಿನ ಮಾತ್ರ ಕೊರೊನಾ ಇರುವುದಾ? ಎಂದು ವ್ಯಾಪಾರಸ್ಥರು ಪ್ರಶ್ನಿಸುತ್ತಿದ್ದಾರೆ.
ವೀಕೆಂಡ್ ಕರ್ಫ್ಯೂ ಅಗತ್ಯವಿಲ್ಲ. ಶನಿವಾರ ಹೆಚ್ಚಿನವರಿಗೆ ವೇತನ ಸಿಗುವ ದಿನ. ಆ ದಿನ ಕರ್ಫ್ಯೂ ಹೇರಿದರೆ ನಾವೇನು ಮಾಡುವುದು ಎಂದು ಮಂಗಳೂರಿನ ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.
ಒಂದು ವೇಳೆ ಕರ್ಫ್ಯೂ ಮಾಡಲೇಬೇಕು ಅಂತ ಜಿಲ್ಲಾಡಳಿತಕ್ಕೆ ಮನಸ್ಸಿದ್ದರೆ ಭಾನುವಾರ ಇಡೀ ದಿನ ಕರ್ಫ್ಯೂ ಹೇರಲಿ. ವೀಕೆಂಡ್ ಇರೋದು ಸರ್ಕಾರಿ ನೌಕರರಿಗೆ, ಅಧಿಕಾರಿಗಳಿಗೆ. ಆದ್ರೆ, ಬೀದಿ ಬದಿ ವ್ಯಾಪಾರಸ್ಥರಿಗೆ ವೀಕೆಂಡ್ ಅಂತ ಇಲ್ಲ. ನಮಗೆ ವ್ಯಾಪಾರ ಹೆಚ್ಚು ಹಾಗೋದು ಶನಿವಾರ, ರವಿವಾರ ಮಾತ್ರ. ಈ ದಿನದಂದೇ ವಾರಾಂತ್ಯ ಕರ್ಫ್ಯೂ ಮಾಡುವುದು ಎಷ್ಟು ಸರಿ? ಈ ಮೂಲಕ ಬಡ ವ್ಯಾಪಾರಿಗಳ ಹೊಟ್ಟೆಗೆ ಹೊಡೆದಿದ್ದಾರೆ ಎಂಬುದು ವ್ಯಾಪಾರಸ್ಥರ ಆಕ್ರೋಶಭರಿತ ಮಾತು.
PublicNext
20/01/2022 11:01 pm