ಉಡುಪಿ: ಉಡುಪಿಯಲ್ಲಿ ಆಟೋ ಚಾಲಕರೊಬ್ಬರು ಟ್ರಾಫಿಕ್ ಪೊಲೀಸರಿಗೆ ಉಡಾಫೆಯ ಉತ್ತರ ಕೊಟ್ಟು ,ಫೈನ್ ಕಟ್ಟುವುದಿಲ್ಲ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.ಕಲ್ಸಂಕದಲ್ಲಿ ಯೂನಿಫಾರ್ಮ್ ಹಾಕದ ,ಮಾಸ್ಕ್ ಹಾಕದ ಆಟೋ ಚಾಲಕರೊಬ್ಬರನ್ನು ಟ್ರಾಫಿಕ್ ಪೊಲೀಸರು ನಿಲ್ಲಿಸಿದ್ದಾರೆ.ಮಾಸ್ಕ್ ಎಲ್ಲಿ ,ಯೂನಿಫಾರ್ಮ್ ಎಲ್ಲಿ ಎಂದು ಕೇಳಿದ್ದಾರೆ.ಗಾಡಿ ಸೈಡಿಗಿಡಿ ಎಂದಿದ್ದಾರೆ.
ಈ ವೇಳೆ ಪೊಲೀಸರ ಪ್ರತೀ ಮಾತಿಗೂ ಆಟೋ ಚಾಲಕ ಉಡಾಫೆಯ ಉತ್ತರ ನೀಡಿದ್ದಾರೆ.ಮಾಸ್ಕ್ ಹಾಕಿಲ್ಲ.ಯೂನಿಫಾರ್ಮ್ ಇಲ್ಲ. ಗಾಡಿ ನಿಲ್ಲಿಸುವುದಿಲ್ಲ.ಗಾಡಿ ಏಕೆ ನಿಲ್ಲಿಸಬೇಕು ? ಇದನ್ನು ನಾನೇನೂ ಕದ್ದು ತಂದದ್ದಲ್ಲ! ಎಂದು ಚಾಲಕ ಉಡಾಫೆಯಿಂದ ಉತ್ತರಿಸಿದ್ದಾರೆ.ಕೊನೆಗೆ ಚಾಲಕನನ್ನು ಸ್ಟೇಷನ್ ಗೆ ಕರೆದೊಯ್ಯುವಷ್ಟರಲ್ಲಿ ಟ್ರಾಫಿಕ್ ಪೊಲೀಸರು ಸುಸ್ತಾಗಿದ್ದಾರೆ!
Kshetra Samachara
17/01/2022 12:00 pm