ವಿಟ್ಲ: ಇತ್ತೀಚೆಗೆ ಸಾಲೆತ್ತೂರಿನ ವರನೊಬ್ಬ ಧರಿಸಿದ್ದ ವೇಷ ಭೂಷಣಕ್ಕೆ ಸಂಬಂಧಪಟ್ಟಂತೆ ಕೋಮು ಉದ್ರೇಶಕ ಪೋಸ್ಟ್ ಹಾಕಿದ್ದ ವ್ಯಕ್ತಿಯ ಮೇಲೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಲೆತ್ತೂರಿಗೆ ಬಂದ ಮದುಮಗ ಕೊರಗಜ್ಜ ದೈವವನ್ನು ಹೋಲುವ ರೀತಿಯಲ್ಲಿ ವೇಷ ಹಾಕಿದ್ದ ಇದು ಭಾರೀ ವಿವಾದವಾಗಿತ್ತು.
ಈ ಘಟನೆಯನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ಉಲ್ಲೇಖಿಸುವಾಗ ಫೆಡರಲ್ ಬ್ಯಾಂಕಿನ ಅಧಿಕಾರಿ ವಿಷ್ಣು ಪ್ರಸಾದ್ ನಿಡ್ಡಾಜೆ ಎಂಬಾತ ಮಂಗಳೂರಿನಲ್ಲೂ ಗುಜರಾತ್ ಮಾದರಿಯಂತೆ ಮುಸ್ಲಿಮರ ನರಮೇಧ ನಡೆಸಬೇಕು. ಹಾಗಾದರೆ ಮಾತ್ರ ಅವರು ಪಾಠ ಕಲಿಯಲಿದ್ದಾರೆ ಎಂಬರ್ಥ ಬರುವ ರೀತಿಯಲ್ಲಿ ಪೋಸ್ಟ್ ಹಾಕಿದ್ದ.
ಈ ಕುರಿತು ಪಿ ಎಫ್ ಐ ಸಂಘಟನೆ ವಿಟ್ಲ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನ ಆಧಾರದಲ್ಲಿ ಇದೀಗ ಎಫ್ ಐ ಆರ್ ದಾಖಲಾಗಿದೆ.
Kshetra Samachara
14/01/2022 10:52 pm