ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ - ಉತ್ತರಕನ್ನಡ ಜಿಲ್ಲೆ ಗಡಿಭಾಗದಲ್ಲಿ ತೀವ್ರಗೊಂಡ ತಪಾಸಣೆ

ಬೈಂದೂರು: ರಾಜ್ಯಾದ್ಯಂತ ನೈಟ್ ಕಪ್ರ್ಯೂ ಹಿನ್ನಲೆಯಲ್ಲಿ ಉಡುಪಿ ಉತ್ತರ ಕನ್ನಡ ಗಡಿ ಭಾಗದಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ.

ಉಡುಪಿ - ಉತ್ತರಕನ್ನಡ ಗಡಿಭಾಗವಾದ ಶಿರೂರು ಚೆಕ್ ಪೋಸ್ಟ್ ನಲ್ಲಿ ಭಾರೀ ಬಂದೊಬಸ್ತ್ ಮಾಡಲಾಗಿದ್ದು , ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ.ಹೊರಜಿಲ್ಲೆ ಮತ್ತು ಹೊರರಾಜ್ಯದ ವಾಹನಗಳನ್ನು ತಪಾಸಣೆ ನೆಡೆಸಿದ ಬೈಂದೂರು ಪೋಲಿಸರು ,ಅಗತ್ಯ ದಾಖಲೆಗಳನ್ನು ಪರಿಶೀಲಿಸಿದರು.ರಾತ್ರಿ 10 ಗಂಟೆ ಬಳಿಕ ಅನಗತ್ಯ ಸಂಚರಿಸದಂತೆ ಮೊದಲ ದಿನ ಪೊಲೀಸರು ಎಚ್ಚರಿಕೆ ನೀಡಿದರು. ಸರಕಾರದ ಆದೇಶ ಪಾಲಿಸದಿದ್ದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ವಿಷ್ಣುವರ್ಧನ್ ಹೇಳಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

29/12/2021 09:39 am

Cinque Terre

17.13 K

Cinque Terre

0

ಸಂಬಂಧಿತ ಸುದ್ದಿ