ಉಡುಪಿ: ಕಳೆದ ರಾತ್ರಿಯಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಜಂಕ್ಷನ್ನಲ್ಲಿ ಪೊಲೀಸರಿಂದ ವಾಹನ ತಪಾಸಣೆ ಕಾರ್ಯ ನಡೆಯಿತು.ಪೊಲೀಸರು ವಾಹನಗಳನ್ನು ನಿಲ್ಲಿಸಿ ವಿಚಾರಿಸುತ್ತಿರುವ ದೃಶ್ಯ ಅಲ್ಲಲ್ಲಿ ಕಂಡು ಬಂತು. ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ದನ್ ಖುದ್ದು ನಗರದ ಕಲ್ಸಂಕ ಜಂಕ್ಷನ್ ನಲ್ಲಿ ವಾಹನ ತಪಾಸಣೆಯ ನೇತೃತ್ವ ವಹಿಸಿದರು.ಕರ್ಪ್ಯೂ ಮೊದಲ ದಿನವಾದ್ದರಿಂದ ರಾತ್ರಿ ಹತ್ತು ಗಂಟೆಯ ನಂತರ ಓಡಾಡದಂತೆ ಸವಾರರಲ್ಲಿ ಮನವಿ ಮಾಡುವ ದೃಶ್ಯ ಕಂಡು ಬಂತು.ಉಡುಪಿ ನಗರ ಮತ್ತು ಸಂಚಾರಿ ಠಾಣಾ ಪೊಲೀಸರು ಗಸ್ತು ನಡೆಸಿದರು.
Kshetra Samachara
29/12/2021 07:40 am