ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರಾಷ್ಟ್ರೀಯ ಸಬಲೀಕರಣಕ್ಕಾಗಿ ಮದುವೆ ವಯಸ್ಸು ಹೆಚ್ಚಿಸಲಾಗಿದೆ:ಶ್ಯಾಮಲಾ ಕುಂದೆರ್

ಉಡುಪಿ: ಮಹಿಳೆಯರ ಮದುವೆ ವಯಸ್ಸನ್ನು ೨೧ ಕ್ಕೆ ಏರಿಸುವುದು ಅವಶ್ಯಕ. ಕೇಂದ್ರ ಸರಕಾರ ಮಹಿಳೆಯರ ಸಬಲೀಕರಣಕ್ಕಾಗಿಯೇ ಈ ನೀತಿಯನ್ನು ತರುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಮೋದಯವರ ಭೇಟಿ ಬಜಾವೋ, ಭೇಟಿ ಪಡಾವೋ ಯೋಜನೆಯನ್ನೂ ಮಹಿಳೆಯರು ಶಿಕ್ಷಿತರಾಗಬೇಕೆಂಬ ಉದ್ದೇಶದಿಂದ ಜಾರಿಗೆ ತರಲಾಗಿದೆ. ಆದರೆ ಹೆಚ್ಚಿನ ಕಡೆಗಳಲ್ಲಿ ೧೮ ತುಂಬಿದ ಯುವತಿಯರಿಗೆ ಮದುವೆ ಮಾಡಿ ವಿದ್ಯಾಭ್ಯಾಸವನ್ನು ಮೊಟಕು ಗೊಳಿಸಲಾಗುತ್ತಿತ್ತು. ಪದವಿ ಪಡೆಯಲಾಗದೇ ಅನೇಕ ವಿದ್ಯಾರ್ಥಿನಿಯರು ಮನೆಯವರ ಒತ್ತಾಯಕ್ಕೆ ಮಣಿದು ಮದುವೆಯಾದ ಘಟನೆಗಳು ಇವೆ.

೧೮ ತುಂಬಿದ ಯುವತಿ ಮದುವೆಯ ಜೀವನದ ಬಗ್ಗೆ ಮಾನಸಿಕವಾಗಿ ಸಿದ್ದವಾಗಿರುವುದಿಲ್ಲ. ಅದಕ್ಕಾಗಿ ರಾಷ್ಟ್ರೀಯ ಮಹಿಳಾ ಆಯೋಗ ಯುವತಿಯ ಮದುವೆ ವಯಸ್ಸನ್ನು ೨೧ ಕ್ಕೆ ಏರಿಸಬೇಕೆಂದು ಸರಕಾರಕ್ಕೆ ಸಲಹೆ ನೀಡಿತ್ತು. ಕಾಲೇಜು ದಿನಗಳನ್ನು ಪೂರೈಸಬೇಕಾದ ಯುವತಿಗೆ ಮದುವೆ ಮಾಡಿಸಿದರೆ ಆಕೆಯ ಮಾನಸಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಗಳಿಂದ ಸಾಬೀತಾಗಿದೆ.

ಗರ್ಭಿಣಿ, ಬಾಣಂತಿ ಜೀವನ, ಮಗುವನ್ನು ನೋಡಿಕೊಳ್ಳುವುದು ಹೇಗೆ ಎಂದು ತಿಳಿಯದ ವಯಸ್ಸಿನಲ್ಲಿ ಮದುವೆಯಾಗುತ್ತದೆ. ಭಾರತದಲ್ಲಿ ಪ್ರತಿ ೧,೦೦,೦೦೦ ತಾಯಂದಿರಲ್ಲಿ ಜನಿಸುವ ಮಕ್ಕಳಲ್ಲಿ ೧೧೩ ಮಕ್ಕಳು ೩೦ ದಿನಗಳೊಳಗೆ ಮೃತರಾಗುತ್ತಿದ್ದಾರೆ. ಇದಕ್ಕೆ ಕಾರಣ ಯುವತಿ ಬೇಗ ಮದುವೆಯಾಗುವುದು. ಬಾಲ್ಯ ವಿವಾಹವನ್ನು ಸಂಪೂರ್ಣ ನಿಷೇಧಿಸಲೂ ಈ ಕರಡು ಮಸೂದೆ ಜಾರಿಗೆ ತರುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

Edited By : Manjunath H D
Kshetra Samachara

Kshetra Samachara

22/12/2021 01:45 pm

Cinque Terre

7.47 K

Cinque Terre

2

ಸಂಬಂಧಿತ ಸುದ್ದಿ