ಮಂಗಳೂರು: ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹಸುಗೂಸು ಅದಲು ಬದಲಾದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಮಗು ಮತ್ತು ತಂದೆ - ತಾಯಿಯ ಡಿಎನ್‌ಎ ಪರೀಕ್ಷೆಗೆ ಅನುಮತಿ ನೀಡಿದೆ.
ಕುಂದಾಪುರ ನಿವಾಸಿ ಮುಸ್ತಾಫಾ ಅವರು ತಮ್ಮ ಮಗು ಲೇಡಿಗೋಷನ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಅದಲು ಬದಲಾಗಿದೆ ಎಂದು ಆರೋಪಿಸಿದ್ದರು. ಅವರು ನೀಡಿರುವ ದೂರಿನನ್ವಯ ಬಂದರು ಪೊಲೀಸ್ ಠಾಣೆಯಲ್ಲಿ ಮಗು ಅಪಹರಣ ದೂರು ದಾಖಲಾಗಿತ್ತು.
ನ್ಯಾಯಾಲಯ ನೀಡಿರುವ ಸೂಚನೆ ಅನ್ವಯ ಅ.19ರಂದು ಮಗು ಹಾಗೂ ಪೋಷಕರ ಡಿಎಎನ್ ತಪಾಸಣೆ ನಡೆಯಲಿದೆ. ಬಳಿಕ ಅದರ ಸ್ಯಾಂಪಲ್ ಹೈದರಾಬಾದ್ ಅಥವಾ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಮೂರು ತಿಂಗಳೊಳಗೆ ಇದರ ವರದಿ ಬರಲಿದ್ದು, ಈ ವರದಿ ಆಧಾರದಲ್ಲಿ ಮುಂದಿನ ತನಿಖೆ ನಡೆಯಲಿದೆ ಎಂದು ಬಂದರು ಪೊಲೀಸರು ತಿಳಿಸಿದ್ದಾರೆ.
Kshetra Samachara
18/10/2021 09:56 pm