ಉಡುಪಿ: ಧಾರ್ಮಿಕ ಭಾವನೆ ಕೆರಳಿಸುವ ಹಾಗೂ ಕೋಮು ದ್ವೇಷದ ಭಾಷಣ ಮಾಡಿದ ಚೈತ್ರ ಕುಂದಾಪುರ
ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಹಿತರಕ್ಷಣ ವೇದಿಕೆಯ ಮಹಿಳಾ ಘಟಕದ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಅಕ್ಟೋಬರ್ 5 ರಂದು ದಕ್ಷಿಣ ಕನ್ನಡದ ಸುರತ್ಕಲ್‌ನಲ್ಲಿ ಜನಜಾಗೃತಿ ಕಾರ್ಯಕ್ರಮವನ್ನು ಭಜರಂಗದಳದ ಕಾರ್ಯಕರ್ತರು ಆಯೋಜಿಸಿದ್ದರು.ಈ ಕಾರ್ಯಕ್ರಮದಲ್ಲಿ ಚೈತ್ರ ಕುಂದಾಪುರ ಪ್ರಚೋದನಕಾರಿ ಭಾಷಣ ಮಾಡಿದ್ದಾಳೆ.ಒಂದು ವೇಳೆ ಭಜರಂಗದಳ ಕಾರ್ಯಕರ್ತರು ಬಯಸಿದರೆ ಮುಸ್ಲಿಮರ ಮನೆಯಲ್ಲಿ ಒಂದೇ ಒಂದು ಬುರ್ಖಾ ಉಳಿಯುವುದಿಲ್ಲ, ಪ್ರತಿ ಮುಸ್ಲಿಮರ ಹಣೆಗೆ ಕುಂಕುಮ ಇಟ್ಟು ಬರುತ್ತೇವೆ. ಸಮಯ ಬಂದಲ್ಲಿ ಮುಸ್ಲಿಂ ಮನೆಯ ಹೆಣ್ಣು ಮಕ್ಕಳನ್ನು ಕರೆದುಕೊಂಡು ಬರಲು ಗೊತ್ತು ಎಂದು ಕೋಮು ದ್ವೇಷದ ಭಾಷಣ ಮಾಡಿದ್ದಾಳೆ. ಅದಲ್ಲದೆ ಭಜರಂಗದಳ ಮತ್ತು ದುರ್ಗಾವಾಹಿನಿ ವತಿಯಿಂದ ನಡೆದ ಜನಜಾಗೃತಿ ಸಭೆಯಲ್ಲೂ ಈಕೆ ಪ್ರಚೋದನಕಾರಿ ಭಾಷಣ ಮಾಡಿದ್ದು, ಮುಸ್ಲಿಂ ಮತ್ತು ಹಿಂದು ಸಮುದಾಯಗಳ ನಡುವೆ ಐಕ್ಯತೆ ಮುರಿದು ಎರಡು ಸಮುದಾಯಗಳ ನಡುವೆ ಪರಸ್ಪರ ಕಚ್ಚಾಡುವ ಹಾಗೆ ಪ್ರೇರಣೆ ನೀಡಿದ್ದಾಳೆ.ಹಾಗೂ ಮುಸ್ಲಿಂ ಮಹಿಳೆಯರನ್ನು ಬಲಾತ್ಕಾರವಾಗಿ ಮತಾಂತರಿಸಲು ಪ್ರೇರೇಪಣೆ ನೀಡಿರುತ್ತಾಳೆ.ಈಕೆಯ ವಿರುದ್ಧ ಕೇವಲ ದೂರು ದಾಖಲಿಸಿದರೆ ಸಾಲದು.ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಯ ಜಿಲ್ಲಾಧ್ಯಕ್ಷೆ ತಬಸ್ಸುಮ್ ಪಬ್ಲಿಕ್ ನೆಕ್ಸ್ಟ್ ಮೂಲಕ ಆಗ್ರಹಿಸಿದ್ದಾರೆ.
Kshetra Samachara
08/10/2021 03:48 pm