ಮುಲ್ಕಿ: ಕಳೆದ ಕೊರೊನಾ ದಿನಗಳಲ್ಲಿ ಸ್ಥಗಿತಗೊಂಡಿದ್ದ ಮುಲ್ಕಿ ಹೃದಯಭಾಗದ ಕಾರ್ನಾಡು ಶನಿವಾರಸಂತೆ ಕಾರ್ನಾಡು ಜಂಕ್ಷನ್ ಬಳಿ ಪುನರಾರಂಭಗೊಂಡಿದ್ದು ಯಶಸ್ವಿಯಾಗಿ ನಡೆದಿದೆ.
ಶನಿವಾರ ಬೆಳಗ್ಗೆ ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುಭಾಶ್ ಶೆಟ್ಟಿ, ಸ್ಥಳೀಯ ಸದಸ್ಯರಾದ ಪುತ್ತುಬಾವ, ಮುಖ್ಯಾಧಿಕಾರಿ ಚಂದ್ರಪೂಜಾರಿ ನೇತೃತ್ವದಲ್ಲಿ ಸಂತೆ ನಡೆಯುತ್ತಿದ್ದ ಸ್ಥಳಕ್ಕೆ ದಿಡೀರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಈ ಸಂದರ್ಭ ಮಾರುಕಟ್ಟೆ ಸ್ಥಳದಲ್ಲಿ ಅಲ್ಲಲ್ಲಿ ಕಸ ಬಿಸಾಡುತ್ತಿರುವ ಬಗ್ಗೆ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಪರಿಶೀಲಿಸಿ ಸಂತೆ ಅಂಗಡಿಯ ಮಾಲಕರನ್ನು ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದ್ದಾರೆ.
ಬಳಿಕ ಪಬ್ಲಿಕ್ ನೆಕ್ಸ್ಟ್ ಜೊತೆ ಮುಖ್ಯಾಧಿಕಾರಿ ಮಾತನಾಡಿ ಕೊರೋನಾ ನಿಯಮಗಳನ್ನು ಪಾಲಿಸಿಕೊಂಡು ಗುಂಪು ಗುಂಪಾಗಿ ಸೇರದೆ ಸಂತೆ ನಡೆಸಲು ಅಂಗಡಿ ಮಾಲೀಕರಿಗೆ ಸೂಚನೆ ನೀಡಲಾಗಿದೆ.
ನಿಯಮಗಳನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು
Kshetra Samachara
02/10/2021 10:09 pm