ಉಡುಪಿ: ಉಡುಪಿಯಲ್ಲಿ ಮೆಗಾ ಲೋಕ ಅದಾಲತ್ ಅಭಿಯಾನವೇ ನಡೆಯುತ್ತಿದ್ದು ,ಸಾಕಷ್ಟು ಜನ ಇದರ ಪ್ರಯೋಜನ ಪಡೆಯುತ್ತಿದ್ದಾರೆ.ಮುಖ್ಯವಾಗಿ ರಾಜಿ ಸಂಧಾನ ಮತ್ತಿತರ ಮಾರ್ಗಗಳ ಮೂಲಕ ಎರಡೂ ಕಡೆಯವರಿಗೂ ಅನ್ಯಾಯವಾಗದಂತೆ ಪರಿಹಾರ ಸೂಚಿಸುವ ಈ ಕಲ್ಪನೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತಿದೆ.
ಉಡುಪಿಯಲ್ಲಿ ನಡೆದ ಲೋಕ ಅದಾಲತ್ ಮೂಲಕ ತ್ವರಿತವಾಗಿ ನ್ಯಾಯ ಸಿಕ್ಕಿದೆ ಎಂದು ಮಹಿಳೆಯೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.2013 ರಿಂದಲೂ ಇವರ ವ್ಯಾಜ್ಯ ನ್ಯಾಯಾಲಯದಲ್ಲಿತ್ತು.ಆದರೆ ಲೋಕ ಅದಾಲತ್ ಮೂಲಕ ಈ ಜಾಗದ ತಕರಾರು ಶೀಘ್ರ ಇತ್ಯರ್ಥ ಗೊಂಡಿದೆ.ಅದೂ ಅಲ್ಲದೆ ಈ ಮಹಿಳೆಯ ತಾಯಿ ಸಾವನ್ನಪ್ಪಿ ಒಂದು ವರ್ಷ ಅಗುವ ಹೊತ್ತಿಗೇ ಸಮಸ್ಯೆ ಬಗೆಹರಿದಿದ್ದು ಮಹಿಳೆಗೆ ಸಾಕಷ್ಡು ಖುಷಿ ಕೊಟ್ಡಿದೆ.
ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.ಈ ಸಂದರ್ಭ ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಉಪಸ್ಥಿತರಿದ್ದರು.
Kshetra Samachara
01/10/2021 10:56 am