ಉಡುಪಿ: ಪ್ರತಿಷ್ಠಿತ ಉಡುಪಿ ವಕೀಲರ ಸಂಘದ 2021-22 ಮತ್ತು 2022-23ನೇ ಸಾಲಿನ ಅಧ್ಯಕ್ಷರಾಗಿ ಬಿ. ನಾಗರಾಜ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ರೊನಾಲ್ಡ್ ಪ್ರವೀಣ್ ಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂಬಂಧ ಚುನಾವಣಾಧಿಕಾರಿ ಶಶೀಂದ್ರ ಕುಮಾರ್ ಅವರು ಇಂದು ಅಧಿಕೃತ ಘೋಷಣೆ ಮಾಡಿದ್ದಾರೆ.
ಬಿ.ನಾಗರಾಜ್ ಅವರು ಈ ಹಿಂದಿನ ಸಾಲಿನಲ್ಲಿ ವಕೀಲರ ಸಂಘದ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರೆ, ರೊನಾಲ್ಡ್ ಪ್ರವೀಣ್ ಕುಮಾರ್ ಇವರು ಕಳೆದ 4 ಅವಧಿಗಳಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಉಳಿದಂತೆ ಅವಿರೋಧವಾಗಿ ಆಯ್ಕೆಯಾಗಿರುವ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರ ವಿವರ ಇಲ್ಲಿದೆ: ಉಪಾಧ್ಯಕ್ಷರಾಗಿ ದಿನೇಶ್ ಬಿ. ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಘವೇಂದ್ರ ಹೆಗ್ಡೆ, ಶಿವಾನಂದ ಅಮೀನ್, ಹೆಚ್. ಗುರುರಾಜ್ ಶೆಟ್ಟಿ, ಶ್ರೀಮತಿ ಅಶ್ವಿತ ಅಮೀನ್, ಶ್ರೀಮತಿ ಪೂರ್ಣಿಮಾ, ಶ್ರೀಮತಿ ಸ್ವರ್ಣಲತಾ ಮತ್ತು ಶ್ರೀಮತಿ ಅಮೃತಕಲಾ ಇವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.
ಕ್ರೀಡಾ ಕಾರ್ಯದರ್ಶಿ, ಸಾಂಸ್ಕೃತಿಕ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಮತ್ತು ಕಾರ್ಯಕಾರಿ ಸಮಿತಿಯ 13 ಸದಸ್ಯ ಸ್ಥಾನಗಳಿಗೆ ಸಪ್ಟೆಂಬರ್ ತಾ. 24 ರಂದು ಚುನಾವಣೆ ನಡೆಯಲಿದೆ.
Kshetra Samachara
17/09/2021 07:42 pm