ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ:ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಗೆ ಸಖಿಯಲ್ಲಿ ಪುನರ್ವಸತಿ

ಉಡುಪಿ; ಶ್ರೀಕೃಷ್ಣಮಠದ ಸಮೀಪದ ತೆಂಕಪೇಟೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಮಹಿಳೆಯನ್ನು ಸಮಾಜಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ರಕ್ಷಿಸಿರುವ ಘಟನೆ ಮಂಗಳವಾರ ನಡೆದಿದೆ. ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶೆ ಶರ್ಮಿಳಾ ಎಸ್ ಅವರ ಮಾರ್ಗದರ್ಶನದ ಮೇರೆಗೆ, ರಕ್ಷಿಸಲ್ಪಟ್ಟಿರುವ ಮಹಿಳೆಯನ್ನು ನಿಟ್ಟೂರು ಸಖಿ ಒನ್ ಸ್ಟಾಪ್ ಸೆಂಟರಿನಲ್ಲಿ ದಾಖಲಿಸಲಾಗಿದೆ. ಕಾರ್ಯಚರಣೆಯಲ್ಲಿ ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಅರುಣಾ, ಸುಹಾಸನಿ ಭಾಗಿಯಾಗಿದ್ದರು.

ಮಹಿಳೆಯು ಹೆಸರು ಸಂದ್ಯಾ ಎನ್ (40 ) ಎಂದು ಗೊತ್ತಾಗಿದೆ.ಇವರು ಹಾಸನ ಇಲ್ಲಿಯ ನಿವಾಸಿ ಎಂದು ಹೇಳಿಕೊಂಡಿದ್ದಾರೆ. ಸಂಬಂಧಿಕರು ತುರ್ತಾಗಿ ಉಡುಪಿ ನಗರ ಮಹಿಳಾ ಪೊಲೀಸ್ ಠಾಣೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸಮಾಜಸೇವಕರು ಸೂಚಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

24/08/2021 07:43 pm

Cinque Terre

9.76 K

Cinque Terre

0