ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಜಿಲ್ಲಾಡಳಿತದ ಆದೇಶದಂತೆ ಕೊರೊನಾ ವೀಕೆಂಡ್ ಕರ್ಫ್ಯೂ ಬೆಳಗಿನ ಜಾವ ಗೊಂದಲಮಯವಾಗಿದ್ದು ಬಟ್ಟೆ ಅಂಗಡಿಗಳು, ಫ್ಯಾನ್ಸಿ ಸೆಂಟರ್ ತೆರೆದಿದ್ದವು. ಕೂಡಲೇ ನಗರಪಂಚಾಯತ್ ಮುಖ್ಯಾಧಿಕಾರಿ ಚಂದ್ರಪೂಜಾರಿ ನೇತೃತ್ವದಲ್ಲಿ ಆರೋಗ್ಯಾಧಿಕಾರಿ ರಾಜೇಶ್ ಮತ್ತು ನಗರ ಪಂಚಾಯತ್ ಸಿಬ್ಬಂದಿಗಳು ಅಂಗಡಿಗಳನ್ನು ಬಂದ್ ಮಾಡಿಸಿದರು. ಈ ಸಂದರ್ಭ ಅಂಗಡಿ ಮಾಲೀಕರು ಸಂಬಂಧಪಟ್ಟ ಆಡಳಿತದ ವಿರುದ್ಧ ವ್ಯಾಪಾರಕ್ಕೆ ತಾರತಮ್ಯ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಧ್ಯಾಹ್ನ 2 ಗಂಟೆ ಬಳಿಕ ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಮೆಡಿಕಲ್ ಹಾಗೂ ಹೋಟೆಲುಗಳನ್ನು ಹೊರತುಪಡಿಸಿ ಎಲ್ಲ ಅಂಗಡಿಗಳು ಮುಚ್ಚಿದವು. ಆದರೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಡೆರಹಿತ ಬಸ್ಸು ಸಂಚಾರ ,ಹಾಗೂ ಅನ್ಯ ರಾಜ್ಯಗಳ ಸರಕಾರಿ ಬಸ್ಸು ಸಂಚಾರ ಎಂದಿನಂತೆ ಇತ್ತು. ಅಂಗಡಿ ಮುಚ್ಚಲ್ಪಟ್ಟಿದ್ದರೂ ಹೆದ್ದಾರಿ ಹಾಗೂ ಕಿನ್ನಿಗೋಳಿ ಮುಲ್ಕಿ ಹಳೆಯಂಗಡಿ ಒಳರಸ್ತೆಯಲ್ಲಿ ಎಗ್ಗಿಲ್ಲದೆ ದ್ವಿಚಕ್ರ ಹಾಗೂ ಉಳಿದ ವಾಹನಗಳ ಸಂಚಾರ ಎಂದಿನಂತೆ ಇತ್ತು.
ಶನಿವಾರ ಮೂಲ್ಕಿ ತಾಲೂಕಿನ ಕಾರ್ನಾಡುನಲ್ಲಿ 1,ಕೆಮ್ರಾಲ್ ಗ್ರಾ.ಪಂ.ವ್ಯಾಪ್ತಿಯ ,ಅತ್ತೂರು
ನಲ್ಲಿ1,ಪಡುಪಣಂಬೂರು ಪಂಚಾಯತ್ ವ್ಯಾಪ್ತಿಯ 10ನೇ ತೋಕೂರುನಲ್ಲಿ 1,ಹಳೆಯಂಗಡಿ ಗ್ರಾಪಂನಲ್ಲಿ 2.,ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ತಾಳಿಪಾಡಿಯಲ್ಲಿ 1, ಮೆನ್ನಬೆಟ್ಟು ನಲ್ಲಿ 1 . ಕೊಂಡೆ ಮೂಲ ದಲ್ಲಿ 1.ಐಕಳ ಗ್ರಾಪಂ ವ್ಯಾಪ್ತಿಯಲ್ಲಿ 1 ಸೇರಿದಂತೆ ಒಟ್ಟು 9 ಕೊರೊನಾ ಪೊಸಿಟಿವ್ ಪ್ರಕರಣ ದಾಖಲಾಗಿದೆ.
Kshetra Samachara
21/08/2021 10:02 pm