ಮಂಗಳೂರು: ವಂಚನೆ ಪ್ರಕರಣದ ಆರೋಪಿಗಳ ಐಷಾರಾಮಿ ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಸಿಸಿಬಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಸಿಬ್ಬಂದಿ ಆಶಿತ್ ಡಿಸೋಜ ಮತ್ತು ರಾಜಾ ಅವರನ್ನು ಅಮಾನತು ಮಾಡಲಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಸಿಸಿಬಿಯಲ್ಲಿ ಎಸ್ಐ ಆಗಿದ್ದ ಕಬ್ಬಾಳ್ ರಾಜ್ ಹಾಗೂ ಇಕನಾಮಿಕ್, ನಾರ್ಕೊಟಿಕ್ ಹಾಗೂ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ರಾಮಕೃಷ್ಣ ಅವರನ್ನು ಅಮಾನತು ಮಾಡಲಾಗಿತ್ತು. ಕಾರು ಮಹಜರು ಹೊಣೆಯನ್ನು ಮಂಗಳೂರು ದಕ್ಷಿಣ ಎಸಿಪಿ, ಐಪಿಸಿ ಅಧಿಕಾರಿ ರಂಜಿತ್ ಬಂಡಾರು ಅವರಿಗೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಪೊಲೀಸ್ ಆಯುಕ್ತರ ಕಚೇರಿ ಬಳಿ ನಿಲ್ಲಿಸಿರುವ ಎರಡು ಕಾರುಗಳನ್ನು ಆರೋಪಿಗಳ ಸಮ್ಮುಖದಲ್ಲಿ ಮಹಜರು ನಡೆಸಲಾಗಿದೆ.
ಅಲ್ಲದೆ, ಹಣ ವಂಚನೆ ಪ್ರಕರಣದ ಆರೋಪಿಗಳಾದ ಮ್ಯಾಥ್ಯೂ ಹಾಗೂ ರಾಜನ್ ರನ್ನು ಕರೆಸಿ ಖುದ್ದಾಗಿ ಅವರ ಸಮ್ಮುಖದಲ್ಲೇ ಎಸಿಪಿ ರಂಜಿತ್ ಬಂಡಾರು ಕಾರು ಮಹಜರು ನಡೆಸಿದ್ದಾರೆ.
Kshetra Samachara
01/03/2021 11:12 pm