ಉಪ್ಪುಂದ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಕ್ಕಳ ರಕ್ಷಣಾ ಘಟಕ ಉಡುಪಿ, ಬೈಂದೂರು ಪೊಲೀಸ್ ಠಾಣೆ, ಉಪ್ಪುಂದ ಗ್ರಾಪಂ ಜಂಟಿ ಕಾರ್ಯಾಚರಣೆ ನಡೆಸಿ 5 ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಹೀಗೆ ಒಟ್ಟು 6 ಮಕ್ಕಳನ್ನು ರಕ್ಷಿಸಿದೆ.
ಉಪ್ಪುಂದದ ಶ್ರೀ ಮಾರಿಯಮ್ಮನ ಮೂರ್ತಿ ಹೊತ್ತು ಭಿಕ್ಷಾಟನೆ ಮಾಡುತ್ತಿದ್ದ ಹಾವೇರಿ ಮೂಲದ ಮಹಿಳೆಯೊಂದಿಗೆ 6 ವರ್ಷದ ಬಾಲಕ ಭಿಕ್ಷೆ ಬೇಡುತ್ತಿದ್ದ.ಉಳಿದವರು ಭಿಕ್ಷಾಟನೆ ಮತ್ತು ಸಂತೆ ವ್ಯಾಪಾರದಲ್ಲಿ ನಿರತರಾಗಿದ್ದರು. ಬಾಲಕಾರ್ಮಿಕ ಪದ್ಧತಿ ಮತ್ತು ಭಿಕ್ಷಾಟನೆ ಬಗ್ಗೆ ಅರಿವು ನೀಡಿ ಮಕ್ಕಳನ್ನು ರಕ್ಷಿಸಲಾಯಿತು.
ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸದಾನಂದ ನಾಯಕ್ , ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್ , ಕುಂದಾಪುರ ಶಿಶು ಅಭಿವೃದ್ಧಿ ಯೊಜನಾಧಿಕಾರಿ ಶ್ವೇತಾ , ಅಂಗನವಾಡಿ ಮೇಲ್ವಿಚಾರಕಿ ಭಾಗೀರಥಿ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಾದ ಮಹೇಶ್ ದೇವಾಡಿಗ, ಕಪಿಲಾ, ಸಮಾಜ ಕಾರ್ಯಕರ್ತರಾದ ಯೋಗೀಶ್, ಸುರಕ್ಷಾ, ಸಂದೇಶ, ಬೈಂದೂರು ಠಾಣಾ ಸಿಬ್ಬಂದಿ ಯಶೋದಾ, ಉಪ್ಪುಂದ ಗ್ರಾಪಂ ಸದಸ್ಯ ಮೋಹನಚಂದ್ರ, ಕಾರ್ಯದರ್ಶಿ ಗಿರಿಜಾ, ಸಿಬ್ಬಂದಿ ನರಸಿಂಹ ಭಾಗವಹಿಸಿದ್ದರು.
Kshetra Samachara
16/02/2021 09:36 pm