ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ನಿವೃತ್ತ ಪೊಲೀಸ್ ಪೇದೆಯಿಂದಲೇ ಬಡವರ ಕುಮ್ಕಿ ಜಮೀನು ಅತಿಕ್ರಮಣ!

ಹಿರಿಯಡ್ಕ : ಉಡುಪಿ ಜಿಲ್ಲೆಯ ಕೋಡಿಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಪೆರ್ಣಂಕಿಲ ಗ್ರಾಮದಲ್ಲಿ ನಿವೃತ್ತ ಪೊಲೀಸ್ ಪೇದೆಯೊಬ್ಬರು ಬಡವರ ಜಮೀನನ್ನು ಅತಿಕ್ರಮಣ ಮಾಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.ಪೆರ್ಣಂಕಿಲ ಗ್ರಾಮದ ಉಮೇಶ್ ನಾಯಕ್ ಎಂಬುವರು ಸರ್ವೆ ನಂಬರ್ 129 ರಲ್ಲಿ ಮೂರೆಕರೆ 84 ಸೆಂಟ್ ಜಮೀನನ್ನು ನಿವೃತ್ತ ಪೊಲೀಸ್ ಪೇದೆ ಜನಾರ್ಧನ ನಾಯಕಗ ಎಂಬುವರಿಗೆ ಮಾರಾಟ ಮಾಡಿದ್ದರು.ಈ ಜಾಗದ ಪಕ್ಕದ ಸುಮಾರು ಮೂರು ಎಕರೆ ಕುಮ್ಕಿ ಜಾಗವನ್ನು ದಳ್ಳಾಳಿ ಮತ್ತು ನಿವೃತ್ತ ಪೊಲೀಸ್ ಜನಾರ್ಧನ ನಾಯಕ್ ಇಬ್ಬರು ಸೇರಿ ಬೇಲಿ ಹಾಕುವ ಮೂಲಕ ಅತಿಕ್ರಮಣ ಮಾಡಿದ್ದಾರೆ ಎಂದು ಸ್ಥಳೀಯ ಕೃಷಿಕರು ಆರೋಪಿಸಿದ್ದಾರೆ.

ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿದ ಸುತ್ತಮುತ್ತಲ ಕೃಷಿಕರು ಆಕ್ರಮಿತ ಜಾಗವು ರೈತರಿಗೆ ಕೃಷಿ ಚಟುವಟಿಕೆ ಸಂಬಂಧ ಸರಕಾರ ಕೊಟ್ಟಂತಹ ಜಾಗವಾಗಿರುತ್ತದೆ. ಈ ಜಾಗದಲ್ಲಿ ರೈತರು ಗೇರುಬೀಜ ಮಾವು ಹಲಸು ಇನ್ನಿತರ ಫಲವಸ್ತುಗಳನ್ನು ಹಾಕಿಕೊಂಡಿದ್ದು ಅಕ್ರಮ ಸಕ್ರಮ ಅರ್ಜಿಯನ್ನೂ ಸಲ್ಲಿಸಿರುತ್ತಾರೆ.ಇದೀಗ ಈ ಇಬ್ಬರು ಸೇರಿಕೊಂಡು ಜಾಗವನ್ನು ಕಬಳಿಸಿ ಜೆಸಿಬಿ ಮೂಲಕ ಸಮತಟ್ಟು ಮಾಡುತ್ತಿದ್ದಾರೆ. ಇದನ್ನು ಪ್ರಶ್ನಿಸಿದರೆ ಧಮಕಿ ಹಾಕುತ್ತಾರೆ ಎಂದು ಆಸುಪಾಸಿನ ಕೃಷಿಕರು ಹೇಳಿದ್ದಾರೆ. ಈ ಸಂಬಂಧ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ದೂರನ್ನು ನೀಡಿದ್ದು ತಮಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

21/01/2021 01:30 pm

Cinque Terre

18.81 K

Cinque Terre

22

ಸಂಬಂಧಿತ ಸುದ್ದಿ