ಸಿಐಡಿ ವಶದಲ್ಲಿದ್ದಾಳೆ ಕುವೈತ್ ವಿಮಾನ ನಿಲ್ದಾಣದಲ್ಲಿ ನಾಪತ್ತೆಯಾದ ಮಹಿಳೆ

ಉಡುಪಿ : ಕುವೈತ್‌ನಲ್ಲಿ ಮನೆ ಕೆಲಸ ಮಾಡುತ್ತಿದ್ದ ಮಹಿಳೆ ತನ್ನ ತಾಯ್ನಾಡಿಗೆ ಮರಳಿ ಬರುತ್ತಿರುವಾಗ ವಿಮಾನ ನಿಲ್ದಾಣದಲ್ಲಿ ನಾಪತ್ತೆಯಾಗಿದ್ದ ಉಡುಪಿಯ 63 ವರ್ಷದ ಮಹಿಳೆಯನ್ನು ಕುವೈತ್ ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹಿಳೆ ಟಿಕೆಟ್ ಹೊಂದಿದ್ದು ವಿಮಾನ ನಿಲ್ದಾಣದ ಬೋರ್ಡಿಂಗ್‌ನಲ್ಲಿ ಯಾವುದೇ ತೊಂದರೆ ಇರಲಿಲ್ಲ. ಆದರೆ ಎಮಿಗ್ರೆಷನ್‌ ಕ್ಲಿಯರೆನ್ಸ್‌ ಸಂದರ್ಭದಲ್ಲಿ ಅಲ್ಲಿನ ಪೊಲೀಸರು ಮಹಿಳೆಯನ್ನು ತಮ್ಮ ಕಸ್ಟಡಿಗೆ ಪಡೆದಿದ್ದರು ಎನ್ನಲಾಗಿದೆ.

ಎಮಿಗ್ರೆಷನ್‌ ಕ್ರಿಯರೆನ್ಸ್‌ ಸಮಯದಲ್ಲಿ ಹಲವು ತೊಂದರೆ ಎದುರಿಸಿದೆ ಎಂದು ಮಹಿಳೆ ಕುವೈತ್ ವಿಮಾನ ನಿಲ್ದಾಣದಿಂದ ತನ್ನ ಪುತ್ರಿಗೆ ತಿಳಿಸಿ ಬಳಿಕ ತಾಯಿ ಸಂರ್ಪಕಕ್ಕೆ ಸಿಗದ ಕಾರಣ ಪುತ್ರಿಯು ಸೋಷಿಯಲ್ ಮೀಡಿಯಾಗಳಲ್ಲಿ ನನ್ನ ತಾಯಿ ನಾಪತ್ತೆಯಾಗಿದ್ದಾರೆ. ಸಂಪರ್ಕಕ್ಕೆ ಸಿಗುತ್ತಿಲ್ಲ ಎಂಬ ಆಡಿಯೋ ಅಪ್‌ಲೋಡ್‌ ಮಾಡಿ ಹುಡಕಿಕೊಡುವಂತೆ ಮನವಿ ಮಾಡಿದ್ದರು.

ಈ ಬಗ್ಗೆ ತಿಳಿದ ಕೆಲವು ಮುಖಂಡರು ಮಹಿಳೆಯ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಅವರು ಪೊಲೀಸರ ವಶದಲ್ಲಿದ್ದಾರೆ ಎಂದು ತಿಳಿಸಿದರು. ತಾಯಿಯನ್ನು ಏಕೆ ಬಂಧಿಸಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲದೆ ಆತಂಕದಲ್ಲಿರುವ ಮಹಿಳೆಯ ಪುತ್ರಿಯು ಎನ್‌ಆರ್‌ಐ ಫೋರಂ ಕರ್ನಾಟಕದ ಮಾಜಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಆರತಿಯವರು ಕುವೈತ್ ರಾಯಭಾರ ಕಚೇರಿಯೊಂದಿಗೆ ಸಂಪರ್ಕ ಹೊಂದಿದ್ದು ಈ ಸಮಸ್ಯೆಯನ್ನು ಸುಧಾರಿಸಿ ಮಹಿಳೆಯನ್ನು ಮರಳಿ ಕಳುಹಿಸಿ ಕೊಡುವಂತೆ ಮನವಿ ಮಾಡಿದ್ದಾರೆಂದು ವಿಷಯ ತಿಳಿದು ಬಂದಿದೆ.

Kshetra Samachara

Kshetra Samachara

11 days ago

Cinque Terre

10.13 K

Cinque Terre

2

  • sharath kumar s
    sharath kumar s

    alli ya kanune haage thumba danger

  • sharath kumar s
    sharath kumar s

    oh god