ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಕಿಶನ್ ಹೆಗ್ಡೆ ಮರ್ಡರ್ ಗೆ ಹಣಕಾಸು ವ್ಯವಹಾರ ಮುಖ್ಯ ಕಾರಣ: ಎಸ್ಪಿ ಸುದ್ದಿಗೋಷ್ಠಿ

ಉಡುಪಿ: ಕಿಶನ್ ಹೆಗ್ಡೆ ಕೊಲೆ ಪ್ರಕರಣದ 5 ಆರೋಪಿಗಳ ಬಂಧನವಾಗಿದೆ.

ಮಂಗಳೂರಿನ ಕೋಡಿಕೆರೆ ಗ್ಯಾಂಗ್ ನ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಉಡುಪಿ ಎಸ್ಪಿ ವಿಷ್ಣುವರ್ಧನ್ ಅವರು ಮನೋಜ್ ಕುಲಾಲ್ (37), ಚಿತ್ತರಂಜನ್ (27), ಚೇತನ್(32), ರಮೇಶ್ (38), ದೀಕ್ಷಿತ್ (29) ಬಂಧಿತರು ಎಂದು ತಿಳಿಸಿದ್ದಾರೆ.

ಆರೋಪಿಗಳನ್ನು ಕಾರ್ಕಳದ ಎಸ್ಕೆ ಬಾರ್ಡರ್ ಬಳಿ ವಶಕ್ಕೆ ಪಡೆಯಲಾಯಿತು.ಇವರು 6 ಗಂಟೆಗೆ ಬಾಳೆಹೊನ್ನೂರಿನಿಂದ ವಾಪಸ್ ಬರುತ್ತಿರುವಾಗ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಹಣಕಾಸಿನ ವ್ಯವಹಾರ ಮತ್ತು ವೈಯಕ್ತಿಕ ವೈಷಮ್ಯವೇ ಕೊಲೆಗೆ ಕಾರಣ ಎಂದು ಎಸ್ಪಿ ಹೇಳಿದ್ದಾರೆ.ಮಂಗಳೂರಿನಿಂದ ಕಿಶನ್ ಹೆಗ್ಡೆ ಯನ್ನು ಹಂತಕರು ಹಿಂಬಾಲಿಸಿಕೊಂಡು ಬಂದು,ಹಿರಿಯಡ್ಕ ಬಳಿ ಅಡ್ಡಗಟ್ಟಿ ತಲವಾರಿನಿಂದ ಕಡಿದು ಕೊಲೆ ಮಾಡಿದ್ದಾರೆ.ಪ್ರಮುಖ ಆರೋಪಿ ಮನೋಜ್ ಮೇಲೆ ಈಗಾಗಲೇ 17 ಕೇಸುಗಳಿವೆ.ಚೇತನ್ ಮತ್ತು ಚಿತ್ತರಂಜನ್ ಮೇಲೂ ತಲಾ ಐದು ಪ್ರಕರಣಗಳಿವೆ. ಕೊಲೆಗೆ ಬಳಸಲಾದ ಮೂರು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

26/09/2020 07:55 pm

Cinque Terre

48.11 K

Cinque Terre

0

ಸಂಬಂಧಿತ ಸುದ್ದಿ