ಉಡುಪಿ: "ಟೀಂ ಗರುಡ" ಸುಲಿಗೆ ತಂಡದ ಐದು ಮಂದಿ ಅಂದರ್

ಉಡುಪಿ: ಸಾರ್ವಜನಿಕರಿಂದ ಸೊತ್ತು ಸುಲಿಗೆ ಮಾಡುತ್ತಿದ್ದ ಪ್ರಕರಣಗಳಿಗೆ ಸಂಬಂಧಿಸಿ ಉಡುಪಿ ಪೊಲೀಸರು ಐದು ಸದಸ್ಯರ ಗ್ಯಾಂಗನ್ನು ಭೇದಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಉಡುಪಿ, ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಮುಂಜಾನೆ ಹೊತ್ತಿಗೆ ಸುಲಿಗೆ,ದರೋಡೆ ಯತ್ನ ನಡೆಸುತ್ತಿದ್ದರು.

ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿದ ಎಸ್ಪಿ ವಿಷ್ಣುವರ್ಧನ್, ಆರೋಪಿಗಳ ಮಾಹಿತಿ ನೀಡಿದರು.
ಮಲ್ಲಾರು ಕೊಂಬುಗುಡ್ಡೆ ನಿವಾಸಿ ಮೊಹ್ಮದ್ ಆಶಿಕ್ (19), ನಾವುಂದ ನಿವಾಸಿ ಮಹಮ್ಮದ್ ಆಸೀಫ್ ಯಾನೆ ಆಸೀಫ್ ರೀಝಾ ಯಾನೆ ರಮೀಜ್ (30), ಕುಂದಾಪುರ ನಾವುಂದ ನಿವಾಸಿ ಮಿಸ್ವಾ (22), ಇಜಾಜ್ ಅಹ್ಮದ್ (19) ಮತ್ತು ಮಲ್ಪೆ ಜೋಕಟ್ಟೆ ನಿವಾಸಿ ದಾವೂದ್ ಇಬ್ರಾಹಿಂ ಯಾನೆ ಇಬ್ಬಾ (26) ಬಂಧಿತರು.

ಸೆ.19ರಂದು ಮುಂಜಾನೆ 4ರಿಂದ 6ರ ಅವಧಿಯಲ್ಲಿ ಮಣಿಪಾಲ ಮತ್ತು ಉಡುಪಿ ನಗರ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಸಾರ್ವಜನಿಕರನ್ನು ಬೆದರಿಸಿ, ಚೂರಿ ಮತ್ತು ಸ್ಕ್ರೂ ಡ್ರೈವರ್ ನಿಂದ ಹಲ್ಲೆ ಮಾಡಿ ಹಣ, ಮೊಬೈಲ್ ಲೂಟಿ ಮಾಡಿ ಪರಾರಿಯಾಗಿದ್ದರು. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ 3, ಉಡುಪಿ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಸೆ. 26 ರಂದು ತನಿಖಾ ತಂಡದ ಅಧಿಕಾರಿ, ಸಿಬ್ಬಂದಿ ಸುಲಿಗೆ ಪ್ರಕರಣಗಳ ಆರೋಪಿ ಕಾಪು ಮೂಲದ ಕೊಂಬುಗುಡ್ಡೆ ನಿವಾಸಿ ಮೊಹಮ್ಮದ್ ಆಶಿಕ್ ನನ್ನು ಪತ್ತೆ ಮಾಡಿ ಮಣಿಪಾಲದಲ್ಲಿ ಬಂಧಿಸಿದ್ದರು.

ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಬೈಕ್, ಸ್ಕ್ರೂ ಡ್ರೈವರ್, 1 ಚೂರಿ, ಮೊಬೈಲ್ ವಶಪಡಿಸಲಾಗಿದೆ. ನಿನ್ನೆಯೂ ಸಹ ಆರೋಪಿ ಸುಲಿಗೆ ಕೃತ್ಯ ಮುಂದುವರಿಸಲು ಯೋಜನೆ ಹಾಕಿಕೊಂಡು ಉಡುಪಿ – ಮಣಿಪಾಲ ಪರಿಸರದಲ್ಲಿ ಸುತ್ತಾಡುತ್ತಿದ್ದಾಗ ಪೊಲೀಸರು ಬಂಧಿಸಿದರು. ಆರೋಪಿ ಆಫಿಕ್ 4 ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾದ ನಂತರ ಕಾಪುವಿನಲ್ಲಿ ನಡೆದ ಕೊಲೆ ಪ್ರಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.

ಕಾಪು ಮೂಲದ ಮಲ್ಲಾರು, ಕೊಂಬಗುಡ್ಡೆ ನಿವಾಸಿ ಮಹಮ್ಮದ್ ಆಶಿಕ್ “ಟೀಂ ಗರುಡ" ಎಂಬ ಪಡ್ಡೆ ಹುಡುಗರ ಗ್ಯಾಂಗ್ ನ ನಾಯಕತ್ವ ವಹಿಸಿಕೊಂಡಿದ್ದು ವಿವಿಧ ಅಪರಾಧ ಕೃತ್ಯಗಳನ್ನು ನಡೆಸಿದ್ದಾರೆ. ಎಲ್ಲ ಐವರು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Kshetra Samachara

Kshetra Samachara

1 month ago

Cinque Terre

8.9 K

Cinque Terre

0