ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರಿನಲ್ಲಿ 'ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್' ಓಪನ್

ಮಂಗಳೂರು: ಕೋಮು ವೈಷಮ್ಯ ಸೇರಿದಂತೆ ಇತರ ದುಷ್ಕೃತ್ಯಗಳಿಗೆ ಪ್ರಚೋದನೆ ನೀಡುವ ಸೋಶಿಯಲ್ ಮೀಡಿಯಾಗಳ ಮೇಲೆ ನಿಗಾ ಇರಿಸಿ ಪೊಲೀಸರಿಗೆ ಮಾಹಿತಿ ನೀಡಲು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ 'ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್' ಕಚೇರಿ ಕಾರ್ಯಾರಂಭಗೊಂಡಿದೆ.

ದಿನದ 24 ಗಂಟೆ ನಿರಂತರವಾಗಿ ಕಾರ್ಯ ನಿರ್ವಹಿಸಲಿರುವ ಕಚೇರಿಯಲ್ಲಿ ಆರು ಮಂದಿ ನುರಿತ ತಾಂತ್ರಿಕ ತಜ್ಞರು ಈ ಘಟಕವನ್ನು ನಿರ್ಹಹಣೆ ಮಾಡಲಿದ್ದಾರೆ.

ಮಾನಿಟರಿಂಗ್ ಆರ್ಗನೈಷೇಷನ್, ಆನ್ಲೈನ್ ಮೀಡಿಯಾ, ಇಂಡಿವಿಜ್ವಲ್, ಲಾ ಆ್ಯಂಡ್ ಆರ್ಡರ್ ಡೆಸ್ಕ್ ಗಳನ್ನು ಒಳಗೊಂಡಿದೆ. ಈ ಘಟಕವು ವಿವಿಧ ವಾಟ್ಸ್ ಆ್ಯಪ್ ಗ್ರೂಪ್, ಫೇಸ್ಬುಕ್, ವೆಬ್ಸೈಟ್, ಟೆಲಿಗ್ರಾಂ, ಇನ್ ಸ್ಟಾಗ್ರಾಂ, ಆನ್ಲೈನ್ ಮೀಡಿಯಾ, ಪತ್ರಿಕಾ ಮಾಧ್ಯಮ, ವಿಶ್ವಲ್ ಮೀಡಿಯಾಗಳ ಮೇಲೆ ನಿಗಾ ವಹಿಸಲಿದೆ.

ಸೈಬರ್ ಅಪರಾಧ ಪೊಲೀಸ್ ಠಾಣೆ ಹಾಗೂ ಇಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಪೊಲೀಸ್ ಠಾಣೆ ಕೆಲ ಸಮಯಗಳ ಹಿಂದೆ ವಿಲೀನಗೊಂಡು ಸೆನ್ ಪೊಲೀಸ್ ಠಾಣೆಯಾಗಿ ಮೇಲ್ದರ್ಜೆಗೆ ಏರಿದೆ.

ಸೆನ್ ಪೊಲೀಸ್ ಠಾಣೆಯು ಸೈಬರ್ ಅಪರಾಧಗಳ ಬಗ್ಗೆ ನಿಗಾ ವಹಿಸಿದರೆ, 'ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್' ವಿವಿಧ ಸೋಶಿಯಲ್ ಮೀಡಿಯಾಗಳ ಮೇಲೆ ನಿಗಾ ವಹಿಸಿ ಸಂಬಂಧಪಟ್ಟ ಪೊಲೀಸರಿಗೆ ಮಾಹಿತಿ ರವಾನೆ ಮಾಡಲಿದೆ.

ಈಗಾಗಲೇ ಈ ಸೆಲ್ ಸುಮಾರು 1064 ಅಧಿಕ ವಿವಿಧ ಸಂಘಟನೆಗಳ ಸಾಮಾಜಿಕ ಜಾಲತಾಣಗಳ ಗ್ರೂಪ್ ಗಳ ಮೇಲೆ ಕಣ್ಣು ಇಟ್ಟಿದೆ.

Edited By : Shivu K
Kshetra Samachara

Kshetra Samachara

23/02/2022 01:14 pm

Cinque Terre

10.44 K

Cinque Terre

0

ಸಂಬಂಧಿತ ಸುದ್ದಿ