ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸುಪ್ರೀಂ ನಿಂದ ಹಿಜಾಬ್ ತೀರ್ಪು: ಉಡುಪಿಯ ಅರ್ಜಿದಾರ ಹೇಳಿದ್ದೇನು?

ಉಡುಪಿ: ಹಿಜಬ್ ಕುರಿತಾಗಿ ದ್ವಿಸದಸ್ಯ ಪೀಠದಿಂದ ವಿಭಿನ್ನ ಅಭಿಪ್ರಾಯಗಳು ಬಂದಿವೆ. ನ್ಯಾಯ ವ್ಯವಸ್ಥೆಗೆ ನಾವು ಸಲಾಂ ಕೊಡುತ್ತೇವೆ.ನ್ಯಾಯಯುತ ಮತ್ತು ಮೂಲಭೂತ ಹಕ್ಕಿಗೆ ನಮ್ಮ ಭಾರತದಲ್ಲಿ ಅವಕಾಶವಿದೆ. ಎಂಬುದು ಇವತ್ತು ಸಾಬೀತಾಯಿತು ಎಂದು ಹಿಜಾಬ್ ಅರ್ಜಿದಾರರಲ್ಲೊಬ್ಬರಾದ ಹುಸೇನ್ ಕೋಡಿಬೆಂಗ್ರೆ ಪ್ರತಿಕ್ರಿಯೆ ನೀಡಿದ್ದಾರೆ.

ಹೆಣ್ಣು ಮಕ್ಕಳಿಗೆ ಹೆಚ್ಚು ಶೈಕ್ಷಣಿಕವಾಗಿ ಸಹಾಯ ಮಾಡಬೇಕು,ಅವರನ್ನು ತುಳಿಯಬಾರದು ,ಮೂಲಭೂತ ಹಕ್ಕಿಗೆ ಮಾನ್ಯತೆ ಕೊಡಬೇಕು ಎಂಬ ವಿಷಯ ಕೋರ್ಟ್ ನಲ್ಲಿ ಚರ್ಚೆಯಾಗಿದೆ ಎಂದ ಅವರು,ಸಂತ್ರಸ್ಥರ ಪರವಾಗಿ ಹಲವಾರು ಅಂಶಗಳು ಚರ್ಚೆಗೆ ಬಂದಿವೆ.ಮಕ್ಕಳ ಮೂಲಭೂತ ಹಕ್ಕು ಮತ್ತು ಶಿಕ್ಷಣಕ್ಕೆ ಕೋರ್ಟ್ ಸಹಕಾರ ಮಾಡುತ್ತದೆ ಎಂಬ ನಂಬಿಕೆ ಇದೆ. ದ್ವಿ ಸದಸ್ಯ ಪೀಠಕ್ಕೆ ನಾವು ಗೌರವ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.

ಎಪಿಸಿಆರ್ ಸಂಚಾಲಕ ಹುಸೇನ್ ಕೋಡಿಬೆಂಗ್ರೆ ಸುಪ್ರೀಂ ಕೋರ್ಟ್ ನಲ್ಲಿ ವಿದ್ಯಾರ್ಥಿನಿಯರ ಪರ ಅರ್ಜಿದಾರರಲ್ಲೊಬ್ವರಾಗಿದ್ದಾರೆ.

ಫಿಫ್ಟಿ ಫಿಫ್ಟಿ ತೀರ್ಪು ಬರಬಹುದು ಎಂಬ ನಿರೀಕ್ಷೆ ಮೊದಲೇ ಇತ್ತು ಎಂದಿರುವ ಹುಸೇನ್ ,ದೇಶದ ಸಾವಿರಾರು ವಿದ್ಯಾರ್ಥಿನಿಯರ ಶಿಕ್ಷಣದ ವಿಚಾರ ಇದಾಗಿದೆ.

ಸಂವಿಧಾನದಲ್ಲಿ ಶಿಕ್ಷಣಕ್ಕೆ ಅವಕಾಶ ಇದೆ ಎಂದು ಭಾವಿಸುತ್ತೇವೆ ಎಂದು ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

Edited By : Shivu K
Kshetra Samachara

Kshetra Samachara

13/10/2022 01:09 pm

Cinque Terre

21.63 K

Cinque Terre

4

ಸಂಬಂಧಿತ ಸುದ್ದಿ