ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಳಲಿ ಮಸೀದಿ ವಿವಾದ ಪ್ರಕರಣ : ಆರ್‌ ಟಿಸಿಯಲ್ಲಿ ಮಸೀದಿ ಹೆಸರು ನಮೂದಿಗೆ ಎಸಿ ನ್ಯಾಯಾಲಯದಿಂದ ತಡೆ

ಮಂಗಳೂರು: ಮಳಲಿ ಮಸೀದಿಯ ಭೂಮಿಗೆ ಸಂಬಂಧ ಪಟ್ಟಂತೆ ಆರ್‌ಟಿಸಿಯಲ್ಲಿ ಕಾಲಂ ಸಂಖ್ಯೆ 11ರಲ್ಲಿ ಮಸೀದಿಯ ಹೆಸರು ನಮೂದಿಸಲು ಸಹಾಯಕ ಆಯುಕ್ತರ ನ್ಯಾಯಾಲಯ (ಎಸಿ ಕೋರ್ಟ್‌) ಸೋಮವಾರ ತಡೆಯಾಜ್ಞೆ ನೀಡಿದೆ.

ಮಸೀದಿ ಸ್ಥಳದ ಆರ್‌ಟಿಸಿಯ ಕಾಲಂ ಸಂಖ್ಯೆ 9ರಲ್ಲಿ ಜಾಗದ ಮಾಲಕರು ಸರಕಾರ ಎಂಬುದಾಗಿ ನಮೂದಿಸಿ, ಕಾಲಂ ಸಂಖ್ಯೆ 11ರಲ್ಲಿ ಜಾಗದ ಹಕ್ಕುದಾರರಾಗಿ ಮಸೀದಿ ಹೆಸರನ್ನು ಉಲ್ಲೇಖಿಸಲಾಗಿತ್ತು. ಆದರೆ ಇದನ್ನು ಪ್ರಶ್ನಿಸಿ ಸಹಾಯಕ ಆಯುಕ್ತರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ನ್ಯಾಯಾಲಯ ಮಸೀದಿ ಹೆಸರನ್ನು ನಮೂದಿಸಲು ತಡೆಯಾಜ್ಞೆ ನೀಡಿದೆ.

ಮಳಲಿಯ ಈ ಮಸೀದಿ ನವೀಕರಣ ಮಾಡುತ್ತಿದ್ದ ಕಾಮಗಾರಿ ವೇಳೆ ದೇವಾಲಯವನ್ನು ಹೋಲುವ ರಚನೆಗಳು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್‌ ಕಮಿಷನರ್‌ ಮೂಲಕ ಸರ್ವೇ ನಡೆಸಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಮಂಗಳೂರಿನ 3ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಇದರ ಮುಂದಿನ ವಿಚಾರಣೆ ಜೂ. 22ರಂದು ನಡೆಯಲಿದೆ.

Edited By : Nirmala Aralikatti
Kshetra Samachara

Kshetra Samachara

21/06/2022 03:44 pm

Cinque Terre

8.33 K

Cinque Terre

0

ಸಂಬಂಧಿತ ಸುದ್ದಿ