ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಜಾತ್ರೋತ್ಸವದಲ್ಲಿ ವ್ಯಾಪಾರ ನಿರ್ಬಂಧ; ನಿಯಮಾವಳಿ ಪರಿಶೀಲಿಸಿ ಕ್ರಮ"

ಮಂಗಳೂರು: ಮಂಗಳೂರು ನಗರ ಹೊರವಲಯದ ಮೂಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಕ್ಷೇತ್ರ ಜಾತ್ರಾ ಮಹೋತ್ಸವ ಮಾ. 24 ರಂದು ನಡೆಯಲಿದೆ. ಈ ಜಾತ್ರೋತ್ಸವದಲ್ಲಿ ʼಮತಾಂಧರಿಗೆ ವ್ಯಾಪಾರ ವಹಿವಾಟು ನಡೆಸಲು ಬಿಡುವುದಿಲ್ಲʼ ಎಂಬ ಫ್ಲೆಕ್ಸ್ ಮೂಲ್ಕಿ ಬಸ್ ನಿಲ್ದಾಣ, ಬಪ್ಪನಾಡು ರಾಷ್ಟ್ರೀಯ ಹೆದ್ದಾರಿ ಜಂಕ್ಷನ್, ಕಾರ್ನಾಡು ಜಂಕ್ಷನ್ ಬಳಿ ಕಂಡುಬಂದಿದೆ!

ಈ ಕುರಿತು ಪ್ರತಿಕ್ರಿಯೆ ನೀಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ್, ಈ ಕುರಿತು ನಾವು ತಹಶೀಲ್ದಾರ್ ಹಾಗೂ ಕಾರ್ಪೊರೇಷನ್ ನ ಗಮನಕ್ಕೆ ತಂದಿದ್ದೇವೆ. ಅವರು ಏನು ಮಾಡ್ತಾರೋ ಅದನ್ನು ನೋಡಿ, ನಾವು ಅಗತ್ಯ ಕ್ರಮ ತೆಗೆದುಕೊಳ್ತೀವಿ.

ಅವರು ನಮ್ಮ ನಿಯಮಗಳ ಪ್ರಕಾರ ಇಲ್ಲ‌ ಅಂತಾ ಹೇಳಿದ್ರೆ, ನಾವು ಕಾನೂನು ಸಲಹೆ ಪಡೆದು ಮುಂದಿನ ಕ್ರಮ ತೆಗೆದುಕೊಳ್ತೀವಿ. ಒಂದೊಂದು ದೇಗುಲಗಳು ಆಯಾಯ ಇಲಾಖೆ, ಖಾಸಗಿಯಾಗಿರುತ್ತವೆ. ಹೀಗಾಗಿ ನಿಯಮಾವಳಿ ಪರಿಶೀಲಿಸಿ, ಕಾನೂನು ಉಲ್ಲಂಘನೆ ಆಗಿದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ತೀವಿ ಎಂದರು.

Edited By :
Kshetra Samachara

Kshetra Samachara

22/03/2022 08:16 pm

Cinque Terre

8.3 K

Cinque Terre

0

ಸಂಬಂಧಿತ ಸುದ್ದಿ