ಮಂಗಳೂರು: ರಾಜ್ಯ ಸರಕಾರದ ಹಿಜಾಬ್ ನಿಷೇಧದ ಆದೇಶವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟ್ ತೀರ್ಪು ಅನ್ಯಾಯದ ತೀರ್ಪು ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಷ್ಟ್ರೀಯ ಸಮಿತಿ ಸದಸ್ಯ ಜಾಫರ್ ಸಾದಿಕ್ ಫೈಝಿ ಹೇಳಿದ್ದಾರೆ.
ಹೈಕೋರ್ಟ್ ಇಸ್ಲಾಮಿಕ್ ವಿಧಿ ವಿಧಾನವನ್ನು ತಪ್ಪಾಗಿ ವ್ಯಾಖ್ಯಾನಿಸಿದೆ. ತೀರ್ಪು ಧರ್ಮಾಧರಿತ, ತಾರತಮ್ಯದ ತೀರ್ಪಾಗಿದೆ. ಈ ಅನ್ಯಾಯದ ತೀರ್ಪು ಎಂದಿಗೂ ಅಂತಿಮ ತೀರ್ಪಾಗಲು ಸಾಧ್ಯವಿಲ್ಲ ಎಂದು ಫೈಝಿ ಹೇಳಿದ್ದಾರೆ.
ಇಂದು ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈ ವಿವಾದ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ಶಿಕ್ಷಣದಿಂದ ದೂರವಿಡಲು ನಡೆಸಿದ ಷಡ್ಯಂತ್ರದ ಭಾಗವಾಗಿದೆ. ಕುರಾನ್ ನಲ್ಲಿ ಶಿರೋವಸ್ತ್ರ ಕುರಿತ ಸ್ಪಷ್ಟವಾದ ಉಲ್ಲೇಖವಿದೆ, ಪ್ರವಾದಿ ವಚನದಲ್ಲೂ ಶಿರವಸ್ತ್ರದ ಬಗ್ಗೆ ಸ್ಪಷ್ಟತೆಯಿದೆ. ಆದರೂ ಹೈಕೋರ್ಟ್, ಹಿಜಾಬ್ ಇಸ್ಲಾಮಿನ ಅವಶ್ಯಕ ಭಾಗವಲ್ಲ ಎಂದಿರುವುದು ವಿಪರ್ಯಾಸ ಎಂದು ಹೇಳಿದ್ದಾರೆ.
PublicNext
16/03/2022 10:59 pm