ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಕ್ರಮ, ಅಕ್ರಮ ಎಲ್ಲ ರೀತಿಯ ಗಣಿಗಾರಿಕೆ ಇಲ್ಲಿ ನಿಷೇಧವಾಗಬೇಕು: ಪೇಜಾವರ ಶ್ರೀ ಕರೆ

ಕಾರಿಂಜೆ: ಪ್ರಕೃತಿ ಉಳಿದರೆ ಮಾತ್ರ ನಮಗೆ ಇಲ್ಲಿ ಬದುಕು ಸಾಧ್ಯ. ಆ ಕಾರಣದಿಂದಲೇ ನಮ್ಮ ಪೂರ್ವಜರು‌, ಋಷಿ ಮುನಿಗಳು ಅಂತಹ ಎತ್ತರದ ಶಿಲಾ ಬೆಟ್ಟಗಳು , ದಟ್ಟ ಕಾನನ ಹಾಗೂ ನದೀ ತೀರಗಳಲ್ಲಿ ದೇವತಾ ಸಾನ್ನಿಧ್ಯಗಳನ್ನು ನಿರ್ಮಿಸಿ ಅವುಗಳ ಮೂಲಕ ಪ್ರಕೃತಿ ರಕ್ಷಣೆಯಾಗಬೇಕೆಂಬ ಕರ್ತವ್ಯ ಪ್ರಜ್ಞೆ ಮೂಡಿಸಲು ಯತ್ನಿಸಿದ್ದಾರೆ.

ಅಂತಹ ಒಂದು ಕ್ಷೇತ್ರ ಕಾರಿಂಜ. ಪ್ರಾಚೀನ ನಂಟನ್ನು ಹೊಂದಿರುವ ಈ ಕ್ಷೇತ್ರದ ಮಹಿಮೆ ಅಪಾರವಾದುದು. ಈ ಸನ್ನಿಧಾನದ ಸುತ್ತ ಕಲ್ಲು ಗಣಿಗಾರಿಕೆಯ ಮೂಲಕ ಕ್ಷೇತ್ರದ ಪಾವಿತ್ರ್ಯ ಮತ್ತು ಪ್ರಾಕೃತಿಕ ಸೊಬಗಿಗೆ ಸಂಚಕಾರ ತರುವ ಯತ್ನ ನಡೆಯುತ್ತಿರುವುದು ಅತ್ಯಂತ ಖಂಡನೀಯ.ಇಂತಹ ಬೆಳವಣಿಗೆಗಳನ್ನು ಕೇವಲ ದೇವಳದ ಆಡಳಿತ ಮಂಡಳಿ ಭಕ್ತರು ಹಿಂದೂ ಸಂಘಟನೆಗಳು ಮಾತ್ರವಲ್ಲದೆ ಸಮಸ್ತ ಹಿಂದೂ ಸಮಾಜ ಒಟ್ಟಾಗಿ ಹಿಮ್ಮೆಟ್ಟಿಸಲೇಬೇಕು.

ಇಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಕ್ಷೇತ್ರಕ್ಕೆ ಅಪಾಯ ಎದುರಾಗಿದೆ ಎಂದಾದರೆ ಮುಂದೆ ಮತ್ತಷ್ಟು ಅಪಾಯ ನಿಶ್ಚಿತ.ಆದ್ದರಿಂದ ರಾಜ್ಯದ ಗಣಿ‌ ಸಚಿವರಿಗೆ ಮನವಿ ಮಾಡಿಕೊಂಡಿದ್ದೇವೆ. ಅವರಿಂದ ಒಳ್ಳೆಯ ಭರವಸೆ ದೊರೆತಿದೆ. ಅಂತೂ ಈ ಹೋರಾಟವನ್ನು ಯಶಸ್ವಿಯಾಗಿ ಮುಗಿಸಲೇಬೇಕು .ಕ್ಷೇತ್ರದ ಆರಾಧ್ಯ ಶಕ್ತಿಗಳು ಈ ಸಂಬಂಧ ಎಲ್ಲರಿಗೂ ಸನ್ಮತಿಯನ್ನು ನೀಡಲಿ ‌ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಶ್ರೀ ಕಾರಿಂಜೇಶ್ವರಕ್ಕೆ ಭೇಟಿ ನೀಡಿ ಪಾರ್ವತೀ ಪರಮೇಶ್ವರ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ ಬಳಿಕ , ಆಸುಪಾಸಿನ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳು ಮತ್ತು ಅದರಿಂದಾಗಿ ದೇವಳದ ಬೆಟ್ಟ , ಅನ್ಮಛತ್ರ ಮತ್ತಿತರ ಕಟ್ಟಗಳಿಗೆ ಹಾನಿಯಾಗಿರುವುದನ್ನು ವೀಕ್ಷಿಸಿದ ಬಳಿಕ ನೆರೆದಿದ್ದ ಹಿಂದೂ ಜಾಗರಣ ವೇದಿಕೆಯ ನೂರಾರು ಕಾರ್ಯಕರ್ತರು , ದೇವಳದ ಆಡಳಿತ ಮಂಡಳಿ ಸದಸ್ಯರು , ಅರ್ಚಕರು ಮತ್ತು ಭಕ್ತರನ್ನುದ್ದೇಶಿಸಿ ಮಾತಾಡಿದರು.

Edited By :
Kshetra Samachara

Kshetra Samachara

29/01/2022 06:49 pm

Cinque Terre

5.92 K

Cinque Terre

0

ಸಂಬಂಧಿತ ಸುದ್ದಿ