ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಶ್ರೀ ಕೃಷ್ಣ ಮಠ ಸಂಪರ್ಕ ರಸ್ತೆಗೆ ವಾಹನ ನಿಷೇಧಿಸಿ ಗೇಟ್!; ತೆರವಿಗೆ ಹೋರಾಟ ಎಚ್ಚರಿಕೆ

ಉಡುಪಿ: ಶ್ರೀ ಕೃಷ್ಣಮಠವನ್ನು ಸಂಪರ್ಕಿಸುವ ರಸ್ತೆಗೆ ವಾಹನ ನಿಷೇಧಿಸಿ ಗೇಟು ಹಾಕಿರುವ ಮಠದವರು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇಷ್ಟು ವರ್ಷ ಮುಕ್ತ ಪ್ರವೇಶವಿದ್ದ ಸಾರ್ವಜನಿಕ ರಸ್ತೆಗೆ ಏಕಾಏಕಿ ಕಬ್ಬಿಣದ ಗೇಟು ಏಕೆ? ಎಂಬುದೀಗ ಜನರ ಪ್ರಶ್ನೆ.

ಹೌದು, ಉಡುಪಿಯ ಶ್ರೀಕೃಷ್ಣ ಮಠ ಅಂದರೆ ಕೇವಲ ಒಂದೇ ಮಠ ಅಲ್ಲ. ಸುತ್ತಲೂ ಇರುವ 8 ಮಠಗಳ ರಥಬೀದಿಗೆ ಪ್ರತಿದಿನ ಸಾವಿರಾರು ಜನ ಬರುತ್ತಾರೆ. ರಥಬೀದಿ ಅಂದರೆ ಕೇವಲ ರಥೋತ್ಸವ ನಡೆಯುವ ಸ್ಥಳವಲ್ಲ. ವ್ಯಾಪಾರ-ವಹಿವಾಟು, ಉದ್ಯಮ... ಇತ್ಯಾದಿ ವಾಣಿಜ್ಯ ಚಟುವಟಿಕೆ ತಾಣ. ಈ ರಥಬೀದಿ ಸಂಪರ್ಕಿಸುವ ಅದಮಾರು ಮಠದ ಓಣಿಗೆ ಇದೀಗ ಗೇಟ್ ಬಿದ್ದಿದೆ! ಆದರೆ, ಇದು ಖಾಸಗಿ ರಸ್ತೆ ಅಲ್ಲ, ಬದಲಿಗೆ ನಗರಸಭೆ ನಿರ್ವಹಣೆ ರಸ್ತೆ.

ನಗರಸಭೆಯ ರಸ್ತೆಗೆ ಮಠದವರು ಹೇಗೆ ಗೇಟು ಹಾಕುತ್ತಾರೆ? ಜನ ಸಾಮಾನ್ಯ ಈ ರೀತಿ ಮಾಡಿದರೆ ಕಠಿಣ ಕ್ರಮ ಗ್ಯಾರಂಟಿ. ಆದರೆ, ಮಠದವರಿಗೆ ಯಾಕೆ ವಿನಾಯಿತಿ ನೀಡಿದ್ದೀರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈ ವಿಚಾರವಾಗಿ ನಗರಸಭೆಯಲ್ಲಿ ನಡೆದ ಮೀಟಿಂಗ್‌ ನಲ್ಲಿ ಭಾರಿ ಗದ್ದಲ ಉಂಟಾಗಿದೆ. ಪ್ರತಿಪಕ್ಷ ಕಾಂಗ್ರೆಸ್ ನಾಯಕರು, ಉಡುಪಿಯಲ್ಲಿ ಬಡವರಿಗೊಂದು ನ್ಯಾಯ, ಶ್ರೀಮಂತರಿಗೆ ಇನ್ನೊಂದು ನ್ಯಾಯ ಮಾಡುತ್ತಿದ್ದೀರಿ. ಸಾರ್ವಜನಿಕ ವಾಹನ ಇರಿಸಲು ಅಡ್ಡಿಪಡಿಸಿದರೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

"ಈ ಸ್ಥಳದಲ್ಲಿ ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡಲಾಗುತ್ತಿತ್ತು. ಕೃಷ್ಣಮಠಕ್ಕೆ ಬರುವ ಭಕ್ತರು ಮತ್ತು ರಥಬೀದಿಯಲ್ಲಿ ವ್ಯಾಪಾರಕ್ಕೆ ಬರುವವರು ಇಲ್ಲೇ ವಾಹನ ಪಾರ್ಕ್‌ ಮಾಡುತ್ತಾರೆ. ಅನೇಕ ಸಣ್ಣ ಪುಟ್ಟ ವ್ಯಾಪಾರಿಗಳೂ ಗೂಡಂಗಡಿ ಹಾಕಿ ವ್ಯಾಪಾರ ನಡೆಸುತ್ತಿದ್ದಾರೆ. ಆದರೆ, ಅದಮಾರು ಮಠದವರು ನಗರಸಭೆಯ ಅನುಮತಿ ಪಡೆಯದೆ ಗೇಟ್ ಹಾಕಿದ್ದಾರೆ"

"ರಥಬೀದಿಗೆ ಬರುವ ಸಾರ್ವಜನಿಕರಿಗೆ ಈ ಗೇಟ್ ನಿಂದ ಸಮಸ್ಯೆಯಾಗಿದೆ. ನಮ್ಮಿಂದ ಅನುಮತಿ ಪಡೆದಿಲ್ಲ ಎಂದು ನಗರಸಭೆ ಕೂಡ ತಿಳಿಸಿದ್ದು, ವಾರದೊಳಗೆ ಗೇಟ್ ತೆರವುಗೊಳಿಸುವ ಭರವಸೆ ನೀಡಿದೆ. ಆದರೆ, ಮಠದವರು ತೆರವುಗೊಳಿಸಲು ಒಪ್ಪುತ್ತಾರಾ?"

Edited By : Nagesh Gaonkar
Kshetra Samachara

Kshetra Samachara

30/10/2021 07:47 pm

Cinque Terre

16.77 K

Cinque Terre

0

ಸಂಬಂಧಿತ ಸುದ್ದಿ