ಉಡುಪಿ: ರಾಜ್ಯ ಸರಕಾರದ ನೈಟ್ ಕರ್ಫ್ಯೂ ಗೊಂದಲ, ಕೊರೊನಾ ಎರಡನೇ ಅಲೆಯ ಆತಂಕದ ನಡುವೆ ಈ ಬಾರಿಯ ಕ್ರಿಸ್ಮಸ್ ಸಡಗರ ಕಳೆಗುಂದಿದೆ.
ಉಡುಪಿಯಲ್ಲಿ ಸರಳವಾಗಿ ಕ್ರಿಸ್ಮಸ್ ಆಚರಣೆ ನಡೆಯುತ್ತಿದ್ದು, ಚರ್ಚ್ ಗಳಲ್ಲಿ ಏಸು ಸ್ಮರಣೆ, ಪೂಜೆ ಸರಳವಾಗಿ ನಡೆಯುತ್ತಿವೆ.
ಕಲ್ಯಾಣಪುರದ ಮಿಲಾಗ್ರಿಸ್ ಕೆಥೆಡ್ರಲ್ ಚರ್ಚ್ ನಲ್ಲಿ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಅತಿ ವಂದನೀಯ
ಡಾ. ಜೆರಾಲ್ಡ್ ಐಸಾಕ್ ಲೋಬೊ ಬಲಿ ಪೂಜೆ ಅರ್ಪಿಸಿದರು.
ಕೋವಿಡ್ ನಿಯಮಾವಳಿ ಪಾಲಿಸಿ ಚರ್ಚ್ ಗಳಲ್ಲಿ ಬಲಿಪೂಜೆ ನಡೆಯಿತು. ಚರ್ಚ್ ಗಳು ವಿದ್ಯುದ್ದೀಪಗಳಿಂದ ಅಲಂಕೃತಗೊಂಡಿವೆ. ಅಲ್ಲಲ್ಲಿ ಗೋದಳಿಗಳ ಪ್ರತಿಕೃತಿ ಮೈ-ಮನಕ್ಕೆ ಪುಳಕ ನೀಡುತ್ತಿದ್ದರೂ ರಾತ್ರಿಯೀಗ ಜನಸಂಚಾರ ವಿರಳವಾಗಿ ಕಂಡುಬಂದಿದೆ.
Kshetra Samachara
24/12/2020 10:39 pm