ಕುಂದಾಪುರ: ಇಲ್ಲಿನ ಪ್ರಖ್ಯಾತ ಕ್ರಿಮಿನಲ್ ಲಾಯರ್ ರವಿಕಿರಣ್ ಮುರ್ಡೇಶ್ವರ್ ಅವರ ಕುಂದಾಪುರದ ಮನೆಗೆ ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಶನಿವಾರ ಭೇಟಿ ನೀಡಿದರು.
ಈ ಸಂದರ್ಭ ನಾಗರಾಜ್ ನಿರ್ಮಾಣದ ನಾಗೇಶ್ ನಿರ್ದೇಶನದ ಸಂಸ್ಕಾರ ಭಾರತ ಸಿನೆಮಾದ ಬಗ್ಗೆ ಪ್ರಮೋದ್ ಮುತಾಲಿಕ್ ಅವರು ರವಿಕಿರಣ್ ಮುರ್ಡೃಶ್ವರ್ ಜೊತೆಗೆ ಮಾಹಿತಿ ಪಡೆದರು. ರವಿಕಿರಣ್ ಮುರ್ಡೇಶ್ವರ ಅವರ ಸಿನೆಮಾ ಜೀವನದ ಬಗ್ಗೆ ಚರ್ಚಿಸಿ, ಕಾನೂನಾತ್ಮಕ ಚರ್ಚೆ ನಡೆಸಿದರು. ಈ ಸಂದರ್ಭ ರವಿಕಿರಣ್ ಪುತ್ರ ಚಿತ್ರನಟ ರಥಿಕ್ ಮುರ್ಡೇಶ್ವರ ಇದ್ದರು.
Kshetra Samachara
01/10/2022 02:33 pm